ರಾಜ್ಯ ಹೆದ್ಧಾರಿ ನಿರ್ವಹಣೆಗೆ ವಿಫಲ

  |   Raichurnews

ದೇವದುರ್ಗ: ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿ ನಿರ್ವಹಣೆಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ರಸ್ತೆಯಲ್ಲಿ ಬೃಹದಾಕಾರದ ಗುಂಡಿಗಳು ಬಿದ್ದಿವೆ. ರಸ್ತೆ ವಿಭಜಕಗಳಿಗೆ ಹಾಕಿದ್ದ ಕಬ್ಬಿಣದ ರಕ್ಷಣಾ ಗೋಡೆ ಅಲ್ಲಲ್ಲಿ ಕಿತ್ತೋಗಿವೆ.

ಪಟ್ಟಣದ ಗೌರಂಪೇಟೆ ಮಹರ್ಷಿ ವಾಲ್ಮೀಕಿ ವೃತ್ತದಿಂದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವರೆಗೆ ರಾಜ್ಯ ಹೆದ್ದಾರಿ ಮಧ್ಯದ ರಸ್ತೆ ವಿಭಜಕಕ್ಕೆ ಅಳವಡಿಸಿದ್ದ ಕಬ್ಬಿಣದ ರಕ್ಷಣಾ ಗೋಡೆ ಎಲ್ಲೆಂದರಲ್ಲಿ ಕಿತ್ತಿ ಹೋಗಿದೆ. ಇದರಿಂದಾಗಿ ವೇಗವಾಗಿ ಬರುವ ವಾಹನಗಳು ಆಕಸ್ಮಿಕವಾಗಿ ರಸ್ತೆ ಮಧ್ಯದ ವಿಭಜಕ ಹತ್ತಿ ಇನ್ನೊಂದು ಬದಿಯ ರಸ್ತೆಗೆ ಇಳಿಯುವ ಅಪಾಯ ಎದುರಾಗಿದೆ. ಇನ್ನು ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಬಿದ್ದಿದ್ದರಿಂದ ಬೈಕ್‌, ಕಾರ್‌ ಸೇರಿ ಭಾರೀ ವಾಹನಗಳ ಚಾಲಕರು ಸರ್ಕಸ್‌ ಮಾಡುತ್ತ ವಾಹನ ಚಲಾಯಿಸಬೇಕಿದೆ.

ಇಲ್ಲಿನ ಸಮಸ್ಯೆ ಕುರಿತು ಸಂಘ-ಸಂಸ್ಥೆಯವರು ಮೌಖೀಕವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಲೋಕೋಪಯೋಗಿ ಇಲಾಖೆಯ ಎಇಇ ಬಿ.ಬಿ. ಪಾಟೀಲ ಮತ್ತು ಜೆಇಗಳು ಕಚೇರಿಗೆ ಬರುವುದೇ ಅಪರೂಪವಾಗಿದೆ. ಕೆಲಸ ಕಾರ್ಯ ನಿಮಿತ್ತ ಲೋಕೋಪಯೋಗಿ ಇಲಾಖೆ ಕಚೇರಿಗೆ ಹೋದರೆ ಇರುವ ಸಿಬ್ಬಂದಿ ಸಾಹೇಬರು ಕಾಮಗಾರಿ ನಡೆಯುವ ಸ್ಥಳಕ್ಕೆ ಹೋಗಿದ್ದಾರೆ ಎಂಬ ಹಾರಿಕೆ ಉತ್ತರ ನೀಡುತ್ತಾರೆ ಎಂದು ಸಾರ್ವಜನಿಕರು ದೂರಿದ್ದಾರೆ....

ಫೋಟೋ - http://v.duta.us/mB7XrwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/NYycuAAA

📲 Get Raichur News on Whatsapp 💬