ಲಿಂಗಪತ್ತೆ, ಭ್ರೂಣ ಹತ್ಯೆಗೆ ಕಠಿಣ ಶಿಕ್ಷೆ

  |   Kolar-Karnatakanews

ಕೋಲಾರ: ಪುರುಷ-ಮಹಿಳಾ ಅನುಪಾತದಲ್ಲಿ ವ್ಯತ್ಯಾಸವಾಗುವುದರಿಂದ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಹೆಚ್ಚುವ ಆತಂಕವಿದ್ದು, ಭ್ರೂಣ ಹತ್ಯೆ ತಡೆಗೆ ಕಠಿಣ ಕಾನೂನುಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ಸಿ.ಎಚ್‌.ಗಂಗಾಧರ್‌ ತಿಳಿಸಿದರು.

ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಆಶ್ರಯದಲ್ಲಿ "ಮಗಳನ್ನು ರಕ್ಷಿಸಿ ಮಗಳನ್ನು ಓದಿಸಿ' ಕಾರ್ಯಕ್ರಮದ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ನೆಹರು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಕೀಳರಿಮೆ ಬೇಡ: ದೇಶದಲ್ಲಿ ಈಗಾಗಲೇ ಪುರುಷ-ಮಹಿಳಾ ಅನುಪಾತ 1000: 950ಕ್ಕಿಂತ ಕಡಿಮೆಯಾಗಿದೆ. ಹೆಣ್ಣು ಮಕ್ಕಳೆಂಬ ಕೀಳಿರಿಮೆ ಅಗತ್ಯವಿಲ್ಲ, ಇಂದು ಪ್ರತಿಯೊಂದು ರಂಗದಲ್ಲೂ ಬಾಲಕಿಯರೇ ಮೇಲುಗೈ ಸಾಧಿಸುತ್ತಿರುವುದನ್ನು ಕಾಣುತ್ತಿದ್ದೇವೆ, ಭ್ರೂಣಹತ್ಯೆಯಂತ ಕೃತ್ಯಗಳು ಗಮನಕ್ಕೆ ಬಂದರೆ ಕೂಡಲೇ ದೂರು ನೀಡಿ, ಇದು ಮಹಾಪರಾಧ, ವೈದ್ಯರಿಗೆ 3 ವರ್ಷ ಶಿಕ್ಷೆ ಇದೆ, ಲಿಂಗಪತ್ತೆ ನಿಷೇಧ ಮಾಡಲಾಗಿದೆ ಎಂದು ತಿಳಿಸಿದರು.

1098 ದೂರವಾಣಿಗೆ ಕರೆ ಮಾಡಿ: ದೇಶದಲ್ಲಿ 18ನೇ ಶತಮಾದಲ್ಲಿದ್ದ ಬಾಲ್ಯವಿವಾಹ ಪಿಡುಗು ಇಂದು ಕೆಲವು ಕಡೆ ನಡೆಯುತ್ತಿರುವ ದೂರುಗಳಿವೆ, ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ಕಡ್ಡಾಯವಾಗಿರಬೇಕು. ಅದನ್ನು ಮೀರಿ ಎಲ್ಲಾದರೂ ಮದುವೆಗಳು ನಡೆಯುತ್ತಿದ್ದರೆ ಕೂಡಲೇ 1098 ದೂರವಾಣಿಗೆ ಕರೆ ಮಾಡಿ ದೂರು ನೀಡಿ ಎಂದು ಮಕ್ಕಳಿಗೆ ಸಲಹೆ ನೀಡಿದರು....

ಫೋಟೋ - http://v.duta.us/iXaSZgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/BVEt9QAA

📲 Get Kolar Karnataka News on Whatsapp 💬