ವಿಜಯನಗರ 3ನೇ ಬಾರಿ ಉಪಚುನಾವಣೆಗೆ ಅಣಿ

  |   Bellarynews

„ವೆಂಕೋಬಿ ಸಂಗನಕಲ್ಲು

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿಷ್ಠಿತ ಕ್ಷೇತ್ರ ಎನಿಸಿಕೊಂಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರ ಮೂರನೇ ಬಾರಿಗೆ ಉಪ ಚುನಾವಣೆಗೆ ಅಣಿಯಾಗಿದೆ. ಹಿಂದಿನ ಎರಡು ಉಪಚುನಾವಣೆಗಳಲ್ಲೂ ಸಿಂಗ್‌ ಕುಟುಂಬದವರೇ ಜಯ ಗಳಿಸಿದ್ದು, ಇದೀಗ ನಡೆಯುತ್ತಿರುವ ಉಪಚುನಾವಣೆಯಲ್ಲೂ ಸಿಂಗ್‌ ಕುಟುಂಬದ ನಾಗಾಲೋಟ ಮುಂದುವರಿಯಲಿದೆಯೇ ಎಂಬುದು ಮತದಾರರಲ್ಲಿ ಕುತೂಹಲ ಮೂಡಿಸಿದೆ.

ರಾಜ್ಯ ವಿಧಾನಸಭೆಗೆ 1967ರಲ್ಲಿ ನಡೆದ ಮೂರನೇ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಆರ್‌ .ನಾಗನಗೌಡ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದರು. ಪಿ.ನಾಗಲಿಂಗಯ್ಯ, ಜಂಬಣ್ಣ ಕೋರಿಶೆಟ್ಟಿ ಎಂಬುವರು ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಕ್ಷೇತ್ರದಲ್ಲಿ ಅಂದು 67,576 ಮತಗಳಿದ್ದು, ಚುನಾವಣೆಯಲ್ಲಿ 36,544 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ 2580 ಮತಗಳು ತಿರಸ್ಕೃತವಾಗಿದ್ದವು.

ಚುನಾವಣೆಯಲ್ಲಿ 19,718 ಮತಗಳನ್ನು ಪಡೆದಿದ್ದ ಕಾಂಗ್ರೆಸ್‌ನ ಆರ್‌. ನಾಗನಗೌಡ, ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ಪಿ. ನಾಗಲಿಂಗಯ್ಯ (12736) ವಿರುದ್ಧ 6982 ಮತಗಳ ಅಂತರದಿಂದ ಜಯ ಗಳಿಸಿದ್ದರು. ಮೂರನೇ ಸ್ಥಾನ ಪಡೆದಿದ್ದ ಜಂಬಣ್ಣ ಕೋರಿಶೆಟ್ಟಿ ಕೇವಲ 1510 ಮತಗಳನ್ನು ಪಡೆಯಲಷ್ಟೇ ಶಕ್ತರಾಗಿದ್ದರು. ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಜಯ ಗಳಿಸಿದ್ದ ಆರ್‌. ನಾಗನಗೌಡ, 1970ರಲ್ಲಿ ಅಕಾಲಿಕ ನಿಧನ ಹೊಂದಿದ್ದರಿಂದ ಹೊಸಪೇಟೆ (ವಿಜಯನಗರ) ಕ್ಷೇತ್ರ ಮೊದಲ ಬಾರಿಗೆ ಉಪ ಚುನಾವಣೆ ಎದುರಿಸಬೇಕಾಯಿತು....

ಫೋಟೋ - http://v.duta.us/SYJUvAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/qMF_JgAA

📲 Get Bellary News on Whatsapp 💬