"ವ್ಯವಹಾರ ಮಾದರಿಯಿಂದಾಗಿ ಮಾಧ್ಯಮ ಕವಲು ದಾರಿಯಲ್ಲಿದೆ'

  |   Udupinews

ಕುಂದಾಪುರ: ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ವಸ್ತು ಜಗತ್ತಲ್ಲಿದ್ದರೆ ಅದು ಪತ್ರಿಕೆ ಮಾತ್ರ. ಓದುಗನ ಋಣದಲ್ಲಿ ಮಾಧ್ಯಮಗಳು ಇರುವುದಿಲ್ಲ. ಓದುಗ ಕೊಡುವ ಹಣ ಪತ್ರಿಕೆ ನಡೆಸಲು ಸಾಕಾಗುವುದಿಲ್ಲ. ಪತ್ರಿಕೆ ನಡೆಸುವವರಿಗೂ ಓದುಗರಿಗೂ ಸಂಬಂಧವಿದೆ. ಆದರೆ ಚಾನೆಲ್‌ ನಡೆಸುವವರಿಗೂ ವೀಕ್ಷಕರಿಗೂ ಸಂಬಂಧವಿರುವುದಿಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಈ ಮಾಧ್ಯಮ ಇದೇ ರೀತಿ ಕವಲು ದಾರಿಯಲ್ಲಿರುತ್ತದೆ, ದಿಕ್ಕೆಟ್ಟು ಕೂತಿರುತ್ತದೆ ಎಂದು ಪತ್ರಕರ್ತ ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

ಅವರು ಮಂಗಳವಾರ ಸಂಜೆ ಕುಂದಾಪುರ ಜೂನಿಯರ್‌ ಕಾಲೇಜಿನ ಕಲಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಜಾಗೃತ ಸಮಾಜದಲ್ಲಿ ಮಾತ್ರ ಒಂದು ಪತ್ರಿಕೆ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಿದೆ. ವಿಶ್ವಾಸಾರ್ಹತೆ ಕಳೆದು ಕೊಂಡರೆ ಪತ್ರಿಕೆ ರದ್ದಿಯಾಗಿ ಬಿಡುತ್ತದೆ. ಓದುಗ ಪತ್ರಿಕೆಗಳನ್ನು ಓದುತ್ತಾನೆ, ಆದರೆ ಆತ ಪತ್ರಿಕೆಗಳನ್ನು ನಂಬುತ್ತಿಲ್ಲ. ನಾನು ಮೂವತ್ತು ವರ್ಷಗಳ ಹಿಂದೆ ವೃತ್ತಿಯನ್ನು ಪ್ರವೇಶಿಸುವಾಗ ಇದ್ದ ಮಾಧ್ಯಮ ಕ್ಷೇತ್ರಕ್ಕೂ ಇವತ್ತು ನಾನು ನಿಂತು ನೋಡುವ ಮಾಧ್ಯಮ ಕ್ಷೇತ್ರಕ್ಕೂ ಶತಮಾನಗಳ ಅಂತರ ಎದ್ದು ಕಾಣುತ್ತಿದೆ ಎಂದರು....

ಫೋಟೋ - http://v.duta.us/mPIQ9gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/iIlt0wAA

📲 Get Udupi News on Whatsapp 💬