ಶಿಕ್ಷಕರ ಜವಾಬ್ದಾರಿ ನಿಭಾಯಿಸಿದ ವಿದ್ಯಾರ್ಥಿಗಳು

  |   Haverinews

ಅಕ್ಕಿಆಲೂರು: ಪಟ್ಟಣದ ಶ್ರೀ ಚನ್ನವೀರೇಶ್ವರ ಪ್ರಸಾದ ನಿಲಯ ಸೇವಾ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ವಿಶೇಷವಾಗಿ ಮಕ್ಕಳೇ ಶಿಕ್ಷಕರ ಸರದಿಯಲ್ಲಿ ನಿಂತು ಆಟ-ಪಾಠಗಳಲ್ಲಿ ತೊಡಗಿಕೊಂಡು ಸಂಭ್ರಮಿಸಿದರು.

ಪಟ್ಟಣದ ಜಿಡಿಜಿ ಗುರುಕುಲದಲ್ಲಿ ಗುರುವಾರ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರ 130ನೇ ಜಯಂತಿ ಅಂಗವಾಗಿ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ನಿಮಿತ್ತ ಶಾಲೆಯಲ್ಲಿ ಬೆಳಗ್ಗೆಯಿಂದಲೇ ಮಕ್ಕಳು ಶಿಕ್ಷಕರಾಗಿ ಪಾಠ ಮಾಡಿ, ಆಟೋಟಗಳಲ್ಲಿ ತೊಡಗಿಕೊಂಡು ಮಕ್ಕಳ ದಿನವನ್ನು ವಿಶೇಷವಾಗಿ ಆಚರಿಸಿದರು.

ಪ್ರಾರ್ಥನೆಯಲ್ಲಿ ಶಿಕ್ಷಕರನ್ನು ಸರದಿ ಸಾಲಿನಲ್ಲಿ ನಿಲ್ಲಿಸುವುದು, ಪಾಠದ ಕೋಣೆಗಳಲ್ಲಿ ಪಾಠ ಮಾಡುವುದು, ಆಟಗಳನ್ನು ಆಡಿಸುವುದು ಹೀಗೆ ಇಡೀ ದಿನ ಶಿಕ್ಷಕರ ಹಲವಾರು ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಶಾಲೆಯ ಮಕ್ಕಳು ಗಮನ ಸೆಳೆದರು. ನಂತರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗುರುಕುಲದ ಅಧ್ಯಕ್ಷ ನಾಗರಾಜ ಪಾವಲಿ, ಆಧುನಿಕ ದಿನಗಳಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಎಲ್ಲ ರೀತಿಯ ತರಬೇತಿಗಳನ್ನು ನೀಡಬೇಕಾದ್ದು ಪ್ರತಿಯೊಬ್ಬ ಶಿಕ್ಷಕರ ಜವಾಬ್ದಾರಿಯಾಗಿದೆ.

ಮುಂದಿನ ಬದಲಾವಣೆಗಳಿಗೆ ವೇಗವಾಗಿ ಹೊಂದಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳು ಎಲ್ಲ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪಾಲಕರು ಮನೆಯಲ್ಲಿ ಮಕ್ಕಳಿಗೆ ಉತ್ತೇಜನ ನೀಡಬೇಕಿದೆ. ಎಲ್ಲ ಕ್ಷೇತ್ರಗಳ ಕುರಿತು ಮಕ್ಕಳಿಗೆ ಅರಿವು ಇದ್ದಾಗ ಮಾತ್ರ ಎದುರಾಗುವ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಮಕ್ಕಳು ಶಕ್ತರಾಗುತ್ತಾರೆ ಎಂದರು....

ಫೋಟೋ - http://v.duta.us/SyqSvgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/BkCRIQAA

📲 Get Haveri News on Whatsapp 💬