ಸಹಕಾರಕ್ಕೆ ಬಾಗಲಕೋಟೆ ಕೊಡುಗೆ

  |   Bagalkotnews

ಬಾಗಲಕೋಟೆ: ಮುಳುಗಡೆ ಜಿಲ್ಲೆ ಎಂದು ಕರೆಸಿಕೊಳ್ಳುವ ಬಾಗಲಕೋಟೆ ಪ್ರತ್ಯೇಕ ಜಿಲ್ಲೆಯಾಗುವ 1997ಕ್ಕೂ ಪೂರ್ವ ಅಖಂಡ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಸಹಕಾರ ರಂಗ ಬೆಳೆದಿದೆ. ಇದೀಗ ಪ್ರತ್ಯೇಕ ಜಿಲ್ಲೆಯಾಗಿ 22 ವರ್ಷ ಕಂಡಿರುವ ಬಾಗಲಕೋಟೆ ಸಹಕಾರ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ.

ಅಖಂಡ ಜಿಲ್ಲೆಯಲ್ಲಿ ಸಹಕಾರ ಚಳವಳಿ ಜಾಗೃತಿ ಆರಂಭಗೊಂಡಿದ್ದು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಆಲಮೇಲದಿಂದ. ಅಲ್ಲಿಂದ ಆರಂಭಗೊಂಡ ಸಹಕಾರ ತತ್ವದ ಜಾಗೃತಿ ಅಖಂಡಘಿ ವಿಜಯಪುರ ಜಿಲ್ಲೆ ವ್ಯಾಪಿಸಿಕೊಂಡಿತ್ತು. ಅದರ ಫಲವಾಗಿ ಜಿಲ್ಲೆಯಲ್ಲಿ ಈಗ ಬರೋಬ್ಬರಿ 2096 ಸಹಕಾರಿ ಸಂಘಗಳು (ರಾಷ್ಟ್ರೀಕೃತ ಬ್ಯಾಂಕ್‌ಗಳು ಹೊರತುಪಡಿಸಿ) ತಲೆ ಎತ್ತಿವೆ. ಸಹಕಾರಿಗಳ ಮುಕುಟ ಲಕ್ಷ್ಮೀ-ಬಸವ ಬ್ಯಾಂಕ್‌: ಪಟ್ಟಣ ಸಹಕಾರ ಬ್ಯಾಂಕ್‌ ಗಳಲ್ಲಿ ಜಿಲ್ಲೆಯ ಮೊದಲ ಬ್ಯಾಂಕ್‌ ಎಂಬ ಖ್ಯಾತಿ ಗುಳೇದಗುಡ್ಡದ ಲಕ್ಷ್ಮೀ ಪಟ್ಟಣ ಸಹಕಾರಿ ಬ್ಯಾಂಕ್‌ಗಿದೆ. ಇದು 1913ರಲ್ಲಿ ಆರಂಭಗೊಂಡ ಸಹಕಾರಿ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿದೆ. ಇದಾದ ಬಳಿಕ 2ನೇ ಸ್ಥಾನ ಇರುವುದು ಬಾಗಲಕೋಟೆಯ ಬಸವೇಶ್ವರ ಸಹಕಾರಿ ಬ್ಯಾಂಕ್‌. 1917, ಫೆಬ್ರವರಿ 3ರಂದು ಆರಂಭಗೊಂಡ ಈ ಬ್ಯಾಂಕ್‌ ಪ್ರಕಾಶ ತಪಶೆಟ್ಟಿ ಅವರ ಮುಂದಾಳತ್ವದಲ್ಲಿ ಸದ್ಯ 27 ಶಾಖೆ ಹೊಂದಿದೆ....

ಫೋಟೋ - http://v.duta.us/ey3qRQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/qxnAcQAA

📲 Get Bagalkot News on Whatsapp 💬