ಸಹಕಾರಿಯಲ್ಲಿ ಮುಂಚೂಣಿ ಸಾಧಿಸಿದ ಬೆಳಗಾವಿ

  |   Belgaumnews

ಬೆಳಗಾವಿ: ರಾಜ್ಯದ ಸಹಕಾರ ಕ್ಷೇತ್ರದಲ್ಲಿ ಗಡಿನಾಡು ಬೆಳಗಾವಿಗೆ ವಿಶಿಷ್ಠ ಸ್ಥಾನ. ರಾಜ್ಯಕ್ಕೆ ಮಾದರಿಯಾಗಿರುವ ಸಹಕಾರಿ ಸಂಸ್ಥೆಗಳನ್ನು ಹೊಂದಿ ಮುಂಚೂಣಿಯಲ್ಲಿರುವ ಜಿಲ್ಲೆ. 1959 ರ ಕಾಯ್ದೆಯಡಿ 4500 ಕ್ಕೂ ಅಧಿಕ ಹಾಗೂ ಸೌಹಾರ್ದ ಸಹಕಾರಿ ಕಾಯ್ದೆಯಡಿ 1200ಕ್ಕೂ ಹೆಚ್ಚು ಸೇರಿದಂತೆ ಒಟ್ಟು 5500 ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ.

1904 ರಲ್ಲಿ ಪ್ರಥಮ ಸಹಕಾರ ಸಂಘಗಳ ಕಾಯ್ದೆ ಜಾರಿಯಾದಾಗಲೇ ಜಿಲ್ಲೆಯಲ್ಲಿ ಸಹಕಾರ ಚಳವಳಿಯ ಜನ್ಮವಾಯಿತು. ಅದರ ವ್ಯಾಪ್ತಿ ಕೇವಲ ಕೃಷಿ ಸಾಲ ನೀಡಲು ಸೀಮಿತವಾಗಿತ್ತು. 1905 ರಲ್ಲಿ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಪ್ರಥಮ ಪ್ರಾಥಮಿಕ ಕೃಷಿ ಪತ್ತಿನ ಸಂಘ ಸ್ಥಾಪನೆಯಾಯಿತು. ಮುಂದೆ 1912 ರ ಸಹಕಾರ ಸಂಘಗಳ ಕಾಯಿದೆಯೂ ಕೃಷಿಯೇತರ ಸಾಲ ನೀಡುವ ಹಾಗೂ ಇತರ ಸಹಕಾರಿ ಸಂಘಗಳ ಸ್ಥಾಪನೆಗೆ ಅವಕಾಶ ನೀಡಿದ್ದರಿಂದ ಜಿಲ್ಲೆಯ ಸಹಕಾರಿ ಚಳವಳಿ ಇನ್ನಷ್ಟು ಚುರುಕುಗೊಂಡಿತು.

1918 ರಲ್ಲಿ ಜಿಲ್ಲೆಯ ಮಾತೃಸಂಸ್ಥೆಯಾಗಿ ಸ್ಥಾಪನೆಗೊಂಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಜಿಲ್ಲೆಯಲ್ಲಿ ಸಹಕಾರ ಆಂದೋಲನವು ಪರಿಣಾಮಕಾರಿಯಾಗಿ ಸಾಗಲು ಎಲ್ಲ ಸಹಕಾರ ಸಂಘಗಳಿಗೆ ಸಾಲಸೌಲಭ್ಯ ನೀಡಿ ನೆರವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆ ಮುಂಚೂಣಿಯಲ್ಲಿದ್ದರೂ ಮೊದಲಿನಂತೆ ಸದೃಢತೆ ಈಗ ಕಾಣುತ್ತಿಲ್ಲ. ಹತ್ತಾರು ಸಮಸ್ಯೆಗಳು ಈ ಕ್ಷೇತ್ರವನ್ನು ಕಾಡುತ್ತಿವೆ. ಈಗಿನ ಡಿಜಿಟಲ್‌ ಯುಗದಲ್ಲಿ ಆರ್ಥಿಕ ಹೊರೆ ಹೆಚ್ಚಾಗುತ್ತಿವೆ. ಸರಕಾರದ ಸಾಲಮನ್ನಾ ಯೋಜನೆಗಳು ಸಹಕಾರ ಸಂಘಗಳು ಮೇಲೇಳದಂತೆ ಮಾಡಿವೆ. ಅದರಲ್ಲೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗಿಂತ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಗಳ ಸ್ಥಿತಿ ಬಹಳ ಶೋಚನೀಯವಾಗಿವೆ. ಹೆಚ್ಚು ಹೆಚ್ಚು ಗ್ರಾಹಕರನ್ನು ಆಕರ್ಷಿಸಲು ಈ ಕ್ರೆಡಿಟ್‌ ಸೊಸೈಟಿಗಳು ಸಾಲದ ಮೇಲೆ ಸಾಲ ಕೊಡುತ್ತವೆ. ಆದರೆ ಅದರ ಮರುಪಾವತಿ ಬಹಳ ಕಷ್ಟವಾದ ನಂತರ ಈ ಸೊಸೈಟಿಗಳು ಸಂಕಷ್ಟಕ್ಕೆ ಸಿಲುಕುತ್ತಿವೆ....

ಫೋಟೋ - http://v.duta.us/15gysgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/pP6NzAAA

📲 Get Belgaum News on Whatsapp 💬