ಸಹಕಾರ ಕ್ಷೇತ್ರದಲ್ಲಿ ಜಾತಿ ರಾಜಕೀಯ ಬೇಡ

  |   Chitradurganews

ಚಿತ್ರದುರ್ಗ: ಸಹಕಾರ ಕ್ಷೇತ್ರದಲ್ಲಿ ಜಾತಿ ಮತ್ತು ರಾಜಕೀಯವನ್ನು ಬೆರಸದೆ ಸೇವಾ ಮನೋಭಾವದಿಂದ ಕೆಲಸವನ್ನು ಮಾಡಬೇಕು. ಆಗ ಮಾತ್ರ ಪ್ರಗತಿ ಸಾಧ್ಯ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ಜಿಂಕಲ್‌ ಬಸವರಾಜ್‌ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್‌ ಸಹಯೋಗದಲ್ಲಿ ಗುರುವಾರ ಸಹಕಾರ ಭವನದಲ್ಲಿ ಆಯೋಜಿಸಿದ್ದ 66ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಾತಿ ಹಾಗೂ ಪಕ್ಷಗಳು ಅನಿವಾರ್ಯವಾದರೆ ಚುನಾವಣೆಗೆ ಸೀಮಿತವಾಗಲಿ. ಆಯ್ಕೆಯಾದ ನಂತರ ಸೇವಾ ಮನೋಭಾವ ಮಾತ್ರ ಮುಖ್ಯವಾಗಬೇಕು. ಆಗ ಮಾತ್ರ ಸಹಕಾರ ಕ್ಷೇತ್ರ ಬಲಗೊಳ್ಳುತ್ತದೆ ಎಂದರು.

ದೇಶದ ಪ್ರಥಮ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ದೇಶಕ್ಕೆ ಸ್ವಾತಂತ್ರ್ಯಾ ನಂತರ ನಂತರ ಸಹಕಾರದಿಂದ ದೇಶದ ಪ್ರಗತಿ ಕಾರಣ ಎಂಬುದನ್ನು ಅರಿತು ಸಹಕಾರ ಕ್ಷೇತ್ರದ ಬಲವರ್ಧನೆಗೆ ಹೆಚ್ಚು ಒತ್ತು ನೀಡಿದರು. ಅವರ ಜನ್ಮದಿನದಂದೇ ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಸ್ಮರಿಸಿದರು. ಸಹಕಾರ ಸಂಘಗಳು ಆರಂಭವಾಗದಿದ್ದರೆ ನಾವು ಉತ್ಪಾದಿಸಿದ ವಸ್ತುಗಳ ಮಾರಾಟ ಕಷ್ಟವಾಗುತ್ತಿತ್ತು. ಈಗ ವಿವಿಧ ರೀತಿಯ ಸಹಕಾರ ಸಂಘಗಳು ಸ್ಥಾಪನೆಯಾಗಿ ಜನರಿಗೆ ಸಾಕಷ್ಟು ನೆರವಾಗುತ್ತಿವೆ ಎಂದರು....

ಫೋಟೋ - http://v.duta.us/_2Zt0wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Be1JHAEA

📲 Get Chitradurga News on Whatsapp 💬