ಹೆಸರಿಗಷ್ಟೇ ರಕ್ಕಸಗಿ ಸಾರ್ವಜನಿಕ ಗ್ರಂಥಾಲಯ

  |   Bagalkotnews

ಅಮೀನಗಡ: ರಕ್ಕಸಗಿ ಸಾರ್ವಜನಿಕ ಗ್ರಂಥಾಲಯಕ್ಕೆ ವಾರಸುದಾರವಿಲ್ಲದೆ ಸುಮಾರು ಒಂದೂವರೆ ವರ್ಷಗಳಿಂದ ನಿರ್ವಹಣೆ ಸ್ಥಗಿತಗೊಂಡಿದೆ.

ರಕ್ಕಸಗಿ ಗ್ರಾಮದಲ್ಲಿ 2011ರ ಜನಗಣತಿ ಪ್ರಕಾರ ಸುಮಾರು 1860 ಜನಸಂಖ್ಯೆಯಿದ್ದು, 480 ಕುಟುಂಬಗಳಿವೆ. ಗ್ರಾಮದಲ್ಲಿರುವ ಬಾಡಿಗೆ ಕಟ್ಟಡದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ 1500ಕ್ಕೂ ಹೆಚ್ಚು ಪುಸ್ತಕಗಳಿವೆ. ಆದರೆ ಮೇಲ್ವಿಚಾರಕನ ನಿರ್ಲಕ್ಷತನದಿಂದ ಗ್ರಂಥಾಲಯ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ. ತಿಂಗಳಿಗೊಮ್ಮೆ , ಎರಡು ತಿಂಗಳಿಗೊಮ್ಮೆ ಗ್ರಂಥಾಲಯದ ಮೇಲ್ವಿಚಾರಕರು ಗ್ರಂಥಾಲಯಕ್ಕೆ ಬರುತ್ತಿವುದರಿಂದ ಗ್ರಂಥಾಲಯಕಟ್ಟಡ ಇದೆ ಎಂಬುದು ಕೆಲವರಿಗೆ ಗೊತ್ತೆ ಇಲ್ಲ.

ಸಹಕಾರ ಇದೆ-ನಿರ್ವಹಣೆ ಇಲ್ಲ: ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಇಲ್ಲದಿರುವುದರಿಂದ ಗ್ರಾಪಂ ವತಿಯಿಂದ ಖಾಸಗಿಬಾಡಿಗೆ ಕಟ್ಟಡ ಪಡೆದು ಗ್ರಾಪಂ ವತಿಯಿಂದ ಬಾಡಿಗೆ ಹಣ ನೀಡಲಾಗುತ್ತದೆ. ನಿರ್ವಹಣೆ ಕೊರತೆಯಿಂದ ಓದುಗರು ಗ್ರಂಥಾಲಯದಿಂದ ದೂರ ಉಳಿಯುವಂತಾಗಿದೆ.

ಬಾರದ ಮೇಲ್ವಿಚಾರಕ: ಗ್ರಾಪಂ ಅಧಿ ಕಾರಿಗಳು, ಜನಪ್ರತಿನಿಧಿ ಗಳು ಗ್ರಂಥಾಲಯ ಮೇಲ್ವಿಚಾರಕರಿಗೆ ತಿಳಿವಳಿಕೆ ನೀಡಿದರೂ ಬದಲಾವಣೆಯಾಗಿಲ್ಲ. ಓದುಗರು ಗ್ರಂಥಾಲಯ ಇಲಾಖೆಯ ಅ ಧಿಕಾರಿಗಳಿಗೆ ಮತ್ತು ಮೇಲ್ವಿಚಾರಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ ರಕ್ಕಸಗಿ ಗ್ರಾಪಂಗೆ ಬರುವ ದಿನಪತ್ರಿಕೆಗಳನ್ನು ಗ್ರಂಥಾಲಯದ ಮೇಲ್ವಿಚಾರಕ ತೆಗೆದುಕೊಂಡು ಪತ್ರಿಕೆಯ ಮುಖಪುಟದಲ್ಲಿ ಅದಕ್ಕೆ ಗ್ರಾಪಂ ಗ್ರಂಥಾಲಯ ಎಂದು ಬರೆದು ಅದಕ್ಕೆ ತಮ್ಮ ಹೆಸರು ಬರೆದು ಸಹಿ ಹಾಕುತ್ತಾರೆ. ¤ ಗ್ರಂಥಾಲಯ ನಿರ್ವಹಣೆ ಮಾಡುತ್ತಿಲ್ಲ ಎಂದು ಗ್ರಾಪಂ ಸಿಬ್ಬಂದಿ ಆರೋಪ ಮಾಡಿದ್ದಾರೆ....

ಫೋಟೋ - http://v.duta.us/CSL3HAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/yyZ9RwAA

📲 Get Bagalkot News on Whatsapp 💬