[bellary] - ಬಿಸಿಲುನಾಡಲ್ಲಿ ಚುನಾವಣೆ ಬಿಸಿಯೇ ಇಲ್ಲ!

  |   Bellarynews

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿ ಲೋಕಸಭೆ ಕ್ಷೇತ್ರದ ಚುನಾವಣಾ ಖದರ್ರೆ ಬೇರೆ. ಸೋನಿಯಾಗಾಂಧಿ -ಸುಷ್ಮಾ ಸ್ವರಾಜ್‌ ಸ್ಪರ್ಧೆಯಿಂದಾಗಿ ಬಳ್ಳಾರಿ ಲೋಕಸಭೆ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದ್ದರೆ, ರೆಡ್ಡಿ ಸಹೋದರರು ಪ್ರತಿನಿಧಿಸುವ ಬಳ್ಳಾರಿ ನಗರ ವಿಧಾನಸಭೆ ಕ್ಷೇತ್ರ ತನ್ನದೇ ಆದ ಖದರ್ರು ಹೊಂದಿದೆ.

ಕಳೆದ 2008ರಲ್ಲಿ ಕ್ಷೇತ್ರ ಮರು ವಿಂಗಡೆಯಿಂದಾಗಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರ ಹೊಸದಾಗಿ ರಚನೆಯಾಗಿದ್ದು, ಎರಡು ಬಾರಿ ಬಿಜೆಪಿಯ ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ, ಕಾಂಗ್ರೆಸ್‌ನ ಮಾಜಿ ಶಾಸಕ ಅನಿಲ್‌ ಲಾಡ್‌ ಒಮೆ ಜಯಗಳಿಸಿದ್ದಾರೆ. ರೆಡ್ಡಿ ಸಹೋದರರು ಪ್ರತಿನಿಧಿ ಸುವ ಬಳ್ಳಾರಿ ನಗರ ಕ್ಷೇತ್ರ ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲೇ ಗಮನ ಸೆಳೆದಿದೆ. ಹಾಲಿ ಶಾಸಕ ಜಿ.ಸೋಮಶೇಖರರೆಡ್ಡಿ ಕ್ಷೇತ್ರದ ಕೆಲ ಬಡಾವಣೆಗಳಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪರ ಈಗಾಗಲೇ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಮಾಜಿ ಶಾಸಕ ಅನಿಲ್‌ಲಾಡ್‌ ಸಹ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಪರ ಮತಯಾಚನೆ ಮಾಡುತ್ತಿದ್ದು, ಗಣಿನಗರಿಯಲ್ಲಿ ಲೋಕಸಭೆ ಚುನಾವಣಾ ಖದರ್‌ ನಿಧಾನವಾಗಿ ರಂಗೇರುತ್ತಿದೆ.

ಸಮಸ್ಯೆಗಳ ಗಣಿ: ಅಕ್ರಮ ಗಣಿಗಾರಿಕೆಯಿಂದಾಗಿ ಗಣಿಗಾರಿಕೆಗೆ ಬ್ರೇಕ್‌ ಬಿದ್ದ ಹಿನ್ನೆಲೆಯಲ್ಲಿ ನಗರದಲ್ಲಿನ ಗಣಿ ಕಾರ್ಮಿಕರು ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದ್ದು, ಪರ್ಯಾಯ ವ್ಯವಸ್ಥೆ ಇಲ್ಲವಾಗಿದೆ. ಈ ಕುರಿತು ಹಲವು ಜನಪ್ರತಿನಿಧಿಗಳು ಭರವಸೆ ನೀಡಿದ್ದಾರೆ ಹೊರತು, ಯಾವುದೇ ಪ್ರಯೋಜನವಾಗಿಲ್ಲ. ಇನ್ನು ತಾಲೂಕಿನ ಕುಡಿತಿನಿ ಬಳಿ ಕೈಗಾರಿಕೆ ಸ್ಥಾಪಿಸುವುದಾಗಿ ರೈತರಿಂದ ವಶಕ್ಕೆ ಪಡೆದ ಜಮೀನುಗಳಲ್ಲಿ ದಶಕ ಕಳೆದರೂ ಏನೂ ಸ್ಥಾಪನೆಯಾಗಿಲ್ಲ....

ಫೋಟೋ - http://v.duta.us/siyxSgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/BbrYjgAA

📲 Get Bellary News on Whatsapp 💬