[dakshina-kannada] - ಅಂಬೇಡ್ಕರ್‌ ವಿಶ್ವ ಮಾನವರು: ಮೋಹನ್‌

  |   Dakshina-Kannadanews

ಮಹಾನಗರ: ಕುದುರೆಮುಖ ಪ.ಜಾತಿ/ಪ.ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘ ಮಂಗಳೂರು ಮತ್ತು ಕುದುರೆಮುಖ ಕ್ರೀಡಾ ಮತ್ತು ಮನೋರಂಜನ ಸಮಿತಿಯ ಸಹಯೋಗದೊಂದಿಗೆ ಕಾವೂರು ಕೆಐಒಸಿಎಲ್‌ ಟೌನ್‌ಶಿಪ್‌ನಲ್ಲಿ ಸಂವಿಧಾನ ಶಿಲ್ಪಿ ಡಾ|ಬಿ.ಆರ್‌. ಅಂಬೇಡ್ಕರ್‌ ಅವರ 128ನೇ ಜನ್ಮ ದಿನವನ್ನು ಆಚರಿಸಲಾಯಿತು.

ಮಂಗಳೂರು ವಿಶ್ವವಿದ್ಯಾಲಯ ಎಂ.ಎಸ್‌. ಡಬ್ಲ್ಯು ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಮೋಹನ್‌. ಎಸ್‌. ಸಿಂN ಮಾತನಾಡಿ, ಮುಂದು ವರಿದ ದೇಶಗಳು ಅಂಬೇಡ್ಕರ್‌ಗೆ ವಿಶ್ವ ಮಾನವ ಸ್ಥಾನ ನೀಡಿದ್ದರೂ ಮಹಾನ್‌ ಚಿಂತಕ, ಪರಿವರ್ತಕ ಅಂಬೇಡ್ಕರ್‌ ಕೇವಲ ದಮನಿತ ವರ್ಗದ ಏಳಿಗೆ ಗಾಗಿ ದುಡಿದಿದ್ದಾರೆಂಬ ತಪ್ಪುಕಲ್ಪನೆ, ಕೆಳ ಜಾತಿಯ ಕುಟುಂಬದಲ್ಲಿ ಜನಿಸಿದ್ದರಿಂದ ಇವರ ವಿಚಾರ ಧಾರೆಗಳನ್ನು ಹತ್ತಿಕ್ಕುವ ಕೆಲಸ ನಿರಂತರವಾಗಿ ನಡೆದು ಭಾರತದಲ್ಲಿ ವಿಶ್ವ ಮಾನವ ಸ್ಥಾನದಿಂದ ವಂಚಿತ ರಾಗಿದ್ದರು ಎಂದರು.

ಎಲೆಕ್ಟ್ರಿಕಲ್‌ ಮತ್ತು ಮೆಕಾನಿಕಲ್‌ ಜನರಲ್‌ ಮ್ಯಾನೇಜರ್‌ ಎ.ವಿ. ಶ್ರೀನಿವಾಸ ಭಟ್‌, ಬ್ಲಾಸ್ಟ್‌ ಫರ್ನೆಸ್‌ ಯುನಿಟ್‌ ಜಾಯಿಂಟ್‌ ಜನರಲ್‌ ಮ್ಯಾನೇ ಜರ್‌ ಟಿ. ಗಜಾನನ ಪೈ, ಪ್ರೋಸೆಸ್‌ ಟೆಕ್ನಾಲಜಿ ಜನರಲ್‌ ಮ್ಯಾನೇಜರ್‌ ಬಿ.ವಿ. ಪ್ರಕಾಶ್‌, ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮ್ಯಾನೇ ಜರ್‌ ಎಸ್‌. ಮುರುಗೇಶ್‌, ವಿಚಕ್ಷಣಾಧಿಕಾರಿ ಎಚ್‌.ಎಸ್‌. ಪುಟ್ಟರಾಜು ಪುಷ್ಪ ನಮನ ಸಲ್ಲಿಸಿದರು. ಆವರಣ ದಲ್ಲಿರುವ ನೆಹರೂ ಪ್ರತಿಮೆಗೂ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು....

ಫೋಟೋ - http://v.duta.us/w7U63gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/K_DNBAAA

📲 Get Dakshina Kannada News on Whatsapp 💬