[dakshina-kannada] - ಬಿಜೆಪಿಯಿಂದ ಮೈಬಿ ಚೌಕಿದಾರ್‌ ಪಾದಯಾತ್ರೆ

  |   Dakshina-Kannadanews

ಕುಂಪಲ: ಮತ್ತೂಮ್ಮೆ ಮೋದಿ ಮಗದೊಮ್ಮೆ ನಳಿನ್‌ ಘೋಷಣೆಯೊಂದಿಗೆ ಸೋಮೇಶ್ವರ ಗ್ರಾಮದ ಕುಂಪಲ ಬಗಂಬಿಲದಿಂದ ಕುಂಪಲ ಶಾಲೆ, ಚೇತನ್‌ನಗರವಾಗಿ ಕುಂಪಲ ಬೈಪಾಸ್‌ವರೆಗೆ ಮೈ ಬಿ ಚೌಕಿದಾರ್‌ ಪಾದಯಾತ್ರೆ ನಡೆಯಿತು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್‌ ಕುಂಪಲ ನೇತೃತ್ವದಲ್ಲಿ ವಿಧಾನ ಪರಿಷತ್‌ ವಿರೋಧ ಪಕ್ಷದ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌, ಮಾಜಿ ಶಾಸಕ ಕೆ. ಜಯರಾಮ ಶೆಟ್ಟಿ, ಜಿಲ್ಲಾ ಚುನಾವಣೆ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಕೋಶಾಧಿಕಾರಿ ಸಂಜಯ್‌ ಪ್ರಭು, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಪೂಜಾ ಪೈ, ಕ್ಷೇತ್ರಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಜಿಲ್ಲಾ ಉಪಾಧ್ಯಕ್ಷ ಚಂದ್ರಹಾಸ ಉಳ್ಳಾಲ್‌, ಕಾರ್ಯದರ್ಶಿ ನಮಿತಾ ಶ್ಯಾಮ್‌, ಕ್ಷೇತ್ರ ಪ್ರಭಾರಿ ರಾಧಕೃಷ್ಣ ರೈ ಬೂಡಿಯಾರ್‌, ವಿಶ್ವ ಹಿಂದು ಪರಿಷತ್‌ನ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌, ಗೋಪಾಲ್‌ ಕುತ್ತಾರು, ಧಾರ್ಮಿಕ ಪರಿಷತ್‌ನ ಮಾಜಿ ಸದಸ್ಯ ಕೆ.ಟಿ.ಸುವರ್ಣ, ಕ್ಷೇತ್ರ ಪ್ರ. ಕಾರ್ಯದರ್ಶಿ ಮೋಹನ್‌ ರಾಜ್‌ ಕೆ.ಆರ್‌., ಜಿ.ಪಂ. ಸದಸ್ಯೆ ಧನಲಕ್ಷೀ ಗಟ್ಟಿ, ತಾಲೂಕು ಪಂ. ಸದಸ್ಯ ರವಿಶಂಕರ್‌, ರಾಮಚಂದ್ರ ಕುಂಪಲ, ಮಾಧ್ಯಮ ಸಂಚಾಲಕ ಜೀವನ್‌ ಕುಮಾರ್‌ ತೊಕ್ಕೊಟ್ಟು, ಸೋಮೇಶ್ವರ ಗ್ರಾಮ ಪಂಚಾಯತ್‌ ಅಧ್ಯಕ್ಷ ರಾಜೇಶ್‌ ಉಚ್ಚಿಲ ಸೇರಿದಂತೆ ಮುಖಂಡರು ಭಾಗವಹಿಸಿದ್ದರು.

ಫೋಟೋ - http://v.duta.us/_XjXwwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/CBX37gAA

📲 Get Dakshina Kannada News on Whatsapp 💬