[dakshina-kannada] - “ಸಾಮಾಜಿಕ ಸೇವೆಯಿಂದ ಭವಿಷ್ಯ ಸುಂದರ’

  |   Dakshina-Kannadanews

ಕಿನ್ನಿಗೋಳಿ: ವಿದ್ಯಾರ್ಥಿ ಜೀವನದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಳ್ಳುವುದರಿಂದ ಭವಿಷ್ಯದಲ್ಲಿ ವ್ಯಕ್ತಿತ್ವವು ಸುಂದರವಾಗಿರುವುದು ಎಂದು ಕಿನ್ನಿಗೋಳಿ ಲಯನ್ಸ್‌ ಕ್ಲಬ್‌ನ ನಿಕಟ ಪೂರ್ವ ಅಧ್ಯಕ್ಷೆ ಶಾಂಭವಿ ಶಿವರಾಮ್‌ ಶೆಟ್ಟಿ ಹೇಳಿದರು.

ಪೊಂಪೈ ಕಾಲೇಜು ಐಕಳ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಯೂತ್‌ ರೆಡ್‌ಕ್ರಾಸ್‌ ಘಟಕಗಳ 2018- 19ನೇ ಸಾಲಿನ ದೈನಂದಿನ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸೋಮ ವಾರ ಮಾತನಾಡಿದ ಅವರು, ವಿದ್ಯಾರ್ಥಿಗಳ ಬದುಕನ್ನೇ ಹೊಸತಾಗಿ ರೂಪಿಸಬಲ್ಲದು ಎಂದರು.

ಘಟಕಗಳಿಗೆ ವಿಶೇಷ ಸೇವೆಯನ್ನು ಸಲ್ಲಿಸಿದ ನಿಕಟಪೂರ್ವ ನಾಯಕನಾದ ವಿಶಾಲ್‌ ಬಿ. ಕುಲಾಲ್‌, ತೃತೀಯ ಬಿ.ಕಾಂ. ಬಿ. ಮತ್ತು ವಿಶೇಷ ಅಭಿಮಾನದೊಂದಿಗೆ ಘಟಕಗಳ ಕಾರ್ಯಕ್ರಮಗಳನ್ನು ಸಂಘ ಟಿ ಸುವಲ್ಲಿ ಮುತುವರ್ಜಿವಹಿಸಿದ ಸಂತೋಷ್‌ ಕ್ರಾಸ್ತ ತೃತೀಯ ಬಿ.ಕಾಂ. ಎ. ಇವ ರಿಗೆ ಪೊಂಪೈ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕವು ನೀಡುವ ವಾರ್ಷಿಕ ವಿಶೇಷ ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಹಿರಿಯ ವಿದ್ಯಾರ್ಥಿಗಳಾದ ಪೃಥ್ವಿ, ಅಶ್ವಿ‌ತಾ, ರಶ್ಮಿ ತೃತೀಯ ಬಿ.ಕಾಂ ಎ. ಅವರನ್ನು ಸಮ್ಮಾನಿಸಲಾಯಿತು. ಕಾಲೇಜಿನ ನ್ಯಾಕ್‌ ಸಂಯೋಜನಾಧಿಕಾರಿಯಾದ ಯೋಗಿಂದ್ರ ಬಿ. ಸಮ್ಮಾನ ಕಾರ್ಯಕ್ರಮ ನೆರವೇರಿ ಸಿಕೊಟ್ಟರು.

ಕಾಲೇಜಿನ ಪ್ರಾಚಾರ್ಯ ಕೆ. ಜಗದೀಶ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ನಾಯಕಿ ಕ್ಲೀಟಾ ಮೆಲಿಟಾ ಫೆರ್ನಾಂಡಿಸ್‌ಎರಡೂ ಘಟಕಗಳ ವಾರ್ಷಿಕ ವರದಿಯನ್ನು ವಾಚಿಸಿದರು. ಯೂತ್‌ ರೆಡ್‌ಕ್ರಾಸ್‌ ಘಟಕದ ಕಾರ್ಯಕ್ರಮಾಧಿಕಾರಿ ಸಿಲ್ವಿಯ ಪಾಯ್ಸ ಸ್ವಾಗತಿಸಿ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿ ಕಾರಿ ಡಾ| ಇ. ವಿಕ್ಟರ್‌ ವಾಜ್‌ ವಂದಿಸಿದರು. ರಾಜ್‌ಕುಮಾರ್‌ ದ್ವಿತೀಯ ಬಿ.ಎ. ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನ ಘಟಕದ ನಾಯಕರಾದ ಶ್ರವಣ್‌ ಶೆಟ್ಟಿ ಮತ್ತು ಯೂತ್‌ ರೆಡ್‌ ಕ್ರಾಸ್‌ ಘಟಕದ ನಾಯಕಿಯಾದ ತೃಷಾ ಕಾರ್ಯಕ್ರಮ ಸಂಘಟಿಸಿದರು.

ಫೋಟೋ - http://v.duta.us/CupC0gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/Qt4GCAAA

📲 Get Dakshina Kannada News on Whatsapp 💬