[dharwad] - ಕ್ಷೇತ್ರಾಭಿವೃದ್ಧಿಗೆ ವಿನಯ್‌ ಗೆಲ್ಲಿಸಿ

  |   Dharwadnews

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿನಯ ಕುಲಕರ್ಣಿ ಪರವಾಗಿ ಲಿಡ್ಕರ್‌ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ 55ನೇ ವಾರ್ಡ್‌ನಲ್ಲಿ ಮತಯಾಚನೆ ನಡೆಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ವಿನಯ ಕುಲಕರ್ಣಿ ಅವರು ಉತ್ತಮ ಕೆಲಸಗಾರರಾಗಿದ್ದು, ಜಿಲ್ಲಾ ಸಚಿವರಾಗಿದ್ದ ಸಂದರ್ಭದಲ್ಲಿ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿ ಹಲವಾರು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಕ್ಷೇತ್ರದ ಹಾಗೂ ಜಿಲ್ಲೆಯ ಮತ್ತಷ್ಟು ಅಭಿವೃದ್ಧಿಗೆ ಈ ಬಾರಿ ವಿನಯ ಕುಲಕರ್ಣಿ ಅವರಿಗೆ ತಮ್ಮ ಅತ್ಯಮೂಲ್ಯವಾದ ಮತ ನೀಡಿ ಜಿಲ್ಲೆಯ ಚಿತ್ರಣ ಬದಲಿಸಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಅಕ್ಕಿಹೊಂಡ, ಬೂಸ್‌ ಪೇಟೆ, ತಂಬದ ಓಣಿ, ಹೂಗಾರ ಓಣಿ, ಎಲಿಪೇಟೆ, ಗಬ್ಬೂರು ಗಲ್ಲಿ, ಇದ್ಲಿ ಓಣಿ, ಬಡಿಗೇರ ಓಣಿ, ಚೋಳನವರ ಓಣಿ ಸುತ್ತಲಿನ ಪ್ರದೇಶಗಳ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.

ಮುಖಂಡರಾದ ತಾರಾದೇವಿ ವಾಲಿ, ಮೆಹಮೂದ ಕೋಳೂರು, ವಿಜಯಕುಮಾರ ಕುಂದನಹಳ್ಳಿ, ಮೋಹನ ಅಸುಂಡಿ, ವಿಜುನಗೌಡ ಪಾಟೀಲ, ಎಸ್‌.ಕೆ. ಪಾಟೀಲ, ಶೇಖಣ್ಣ ಹೂಗಾರ, ವಿರೂಪಾಕ್ಷಿಗೌಡ ಪಾಟೀಲ, ಗುರುಸಿದ್ಧಗೌಡ ಪಾಟೀಲ, ಕೊಟ್ರೇಶಗೌಡ ಪಾಟೀಲ, ಬಸವರಾಜ ಅಂಗಡಿ, ರಿಯಾಜ್‌ ಗೌಂಡಿ, ಶಫಿ ಶಿರಗುಪ್ಪಿ, ಶಬ್ಬೀರ್‌ ಚುಹೇ, ಚಂದ್ರಶೇಖರ ಅಲಗುಂಡಗಿ, ಶ್ರೀನಿವಾಸ ಮುರಗೋಡ, ರಾಜೇಶ್ವರಿ ಬಿಲಾನಾ, ಶಾಬೀರಾ ಬೆಣ್ಣಿ, ಹೇಮಲತಾ ಶಿವಮಠ, ಪುಷ್ಪಾ ಅರಳೀಕಟ್ಟಿ ಇನ್ನಿತರರಿದ್ದರು....

ಫೋಟೋ - http://v.duta.us/9eFuWAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/0IgUwgAA

📲 Get Dharwad News on Whatsapp 💬