[haveri] - ಮತಪೆಟ್ಟಿಗೆಗಳ ಸಂಗ್ರಹ-ಮತ ಎಣಿಕೆ ಕೊಠಡಿ ಪರಿಶೀಲನೆ

  |   Haverinews

ಹಾವೇರಿ: ಹಾವೇರಿ ಲೋಕಸಭೆ ಕ್ಷೇತ್ರದ ಚುನಾವಣೆಯ ಮತಪೆಟ್ಟಿಗೆಗಳ ಸಂಗ್ರಹ ಹಾಗೂ ಮತ ಎಣಿಕೆಗಾಗಿ ಸಿದ್ಧಪಡಿಸಿರುವ ಕೊಠಡಿಗಳನ್ನು ಕೇಂದ್ರ ಚುನಾವಣಾ ಆಯೋಗದಿಂದ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತಗೊಂಡಿರುವ ವೀಕ್ಷಕರ ತಂಡ ಪರಿಶೀಲನೆ ನಡೆಸಿತು.

ದೇವಗಿರಿಯಲ್ಲಿರುವ ಸರ್ಕಾರಿ ಎಂಜನಿಯರಿಂಗ್‌ ಕಾಲೇಜಿಗೆ ರವಿವಾರ ಭೇಟಿ ನೀಡಿದ ಕೇಂದ್ರ ಸಾಮಾನ್ಯ ವೀಕ್ಷಕರಾದ ಐಎಎಸ್‌ ಹಿರಿಯ ಅಧಿಕಾರಿ ಡಾ| ಅಖ್ತರ್‌ ರಿಯಾಜ್‌, ವೆಚ್ಚ ವೀಕ್ಷಕರಾದ ಐಆರ್‌ಎಸ್‌ ಅಧಿಕಾರಿ ಹಸನ್‌ ಅಹ್ಮದ್‌ ಹಾಗೂ ಪೊಲೀಸ್‌ ವೀಕ್ಷಕರಾದ ಹಿರಿಯ ಐಪಿಎಸ್‌ ಅಧಿಕಾರಿ ಸಿದ್ಧಾರ್ಥ ಎಂ. ನಾರವಾನೆ ಭೇಟಿ ನೀಡಿ ಪರಿಶೀಲಿಸಿದರು.

ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳು ಹಾಗೂ ಗದಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಒಳಗೊಂಡಿದ್ದು, ಮತದಾನದ ನಂತರ ಪ್ರತಿ ವಿಧಾನಸಭಾ ಕ್ಷೇತ್ರದ ಇವಿಎಂ,

ವಿವಿಪ್ಯಾಟ್‌ಗಳನ್ನು ಮತ ಎಣಿಕೆ ಕೇಂದ್ರ ದೇವಗಿರಿ ಎಂಜನಿಯರಿಂಗ್‌ ಕಾಲೇಜಿಗೆ ತಂದು ದಾಸ್ತಾನು ಮಾಡಲಾಗುವುದು.

ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಪ್ರತ್ಯೇಕ ದಾಸ್ತಾನು ಕೊಠಡಿ ಹಾಗೂ ಪ್ರತ್ಯೇಕವಾಗಿ ಎಣಿಕೆ ಕೊಠಡಿಯನ್ನು ಸಿದ್ಧಪಡಿಸಲಾಗಿದೆ. ಆಯೋಗದ ಮಾರ್ಗಸೂಚಿಯಂತೆ ಗರಿಷ್ಠ ಭದ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕೊಠಡಿಗಳನ್ನು ಸಿದ್ಧಪಡಿಸಲಾಗುತ್ತಿದೆ....

ಫೋಟೋ - http://v.duta.us/CfUS2wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/KRxgsgAA

📲 Get Haveri News on Whatsapp 💬