[raichur] - ಬಿಜೆಪಿಗೆ ಮೋದಿ ಅಲೆ ವರ-ಐಐಟಿ ತಪ್ಪಿಸಿದ ಶಾಪ

  |   Raichurnews

ರಾಯಚೂರು: ಅಲ್ಪ ಸಂಖ್ಯಾತ ಮತಗಳು ಹೆಚ್ಚಾಗಿರುವ ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲದ ಸೆಣಸಾಟಕ್ಕೆ ಅಣಿಯಾಗಿವೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆಯೂ ಬಿಜೆಪಿ-ಕಾಂಗ್ರೆಸ್‌ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು.

ಸದ್ಯಕ್ಕೆ ಬಿಜೆಪಿ ಶಾಸಕರು ಅಧಿಕಾರದಲ್ಲಿರುವ ಈ ಕ್ಷೇತ್ರದಲ್ಲಿ ಅದೇ ಪಕ್ಷದ ಪಾರುಪತ್ಯವಿದೆ ಎಂದು ಹೇಳುವುದು ಕಷ್ಟ. ಅಲ್ಲದೇ, ನಗರ ಪ್ರದೇಶವಾದ್ದರಿಂದ ಪ್ರಜ್ಞಾವಂತ ಮತದಾರರ ಸಂಖ್ಯೆ ಹೆಚ್ಚಾಗಿದೆ. ಬಿಜೆಪಿಗೆ ಮೋದಿ ಅಲೆ ವರವಾದರೆ ಜಿಲ್ಲೆಗೆ ಐಐಟಿ ತಪ್ಪಿಸಿದ ಪಕ್ಷ ಎಂಬ ಸಿಟ್ಟು ಇದೆ. ಆದರೆ, ಅಲ್ಪಸಂಖ್ಯಾತರ ಮತಗಳು ಹೆಚ್ಚಾಗಿದ್ದು, ಕಾಂಗ್ರೆಸ್‌ಗೆ ಒಲವು ತೋರುವ ಸಾಧ್ಯತೆಗಳಿವೆ.

ಶಾಸಕರ ಯತ್ನದಿಂದ ನಗರದಲ್ಲಿ ಕೆಲವೊಂದು ಅಭಿವೃದ್ಧಿ ಕೆಲಸಗಳು ಆಗಿವೆ. ಆದರೆ, ಯುಜಿಡಿ, 24/7 ಕುಡಿಯುವ ನೀರಿನ ಯೋಜನೆ ಇನ್ನೂ ಮುಗಿದಿಲ್ಲ. ಜಿಲ್ಲಾ ಕ್ರೀಡಾಂಗಣ ಉದ್ಘಾಟಿಸಿ ವರ್ಷ ಕಳೆದರೂ ಬಾಕಿ ಕಾಮಗಾರಿ ಮುಗಿದಿಲ್ಲ. ಹೈದರಾಬಾದ್‌ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಅನುದಾನ ಪಡೆದು, ಸಮರ್ಪಕವಾಗಿ ಬಳಸಿಕೊಳ್ಳುವ ಪ್ರಯತ್ನಗಳಾಗುತ್ತಿಲ್ಲ. ಕಾಂಗ್ರೆಸ್‌ ಜಾರಿಗೊಳಿಸಿದ 371ಜೆ ಕಲಂ ಇನ್ನೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ.

ಲೋಕಸಭೆ ಚುನಾವಣೆ ದೇಶದ ಪ್ರಗತಿಗೆ ಸಂಬಂಧಿಸಿದ್ದು, ನಾವು ಪ್ರಧಾನಿ ಅಭ್ಯರ್ಥಿ, ಪಕ್ಷಗಳನ್ನು ನೋಡಿ ಮತ ಹಾಕಬೇಕಾಗುತ್ತದೆ ಎನ್ನುತ್ತಾರೆ ನಗರದ ಯುವಕರು. ಮೀಸಲಾತಿ ನಿಯಮಗಳ ಸಡಿಲಿಕೆ, ಮೇಕ್‌ ಇನ್‌ ಇಂಡಿಯಾ, ಮುದ್ರಾ ಸಾಲ ಸೌಲಭ್ಯಗಳ ಬಗ್ಗೆ ಚರ್ಚೆ ಆಗುತ್ತಿದೆ. ಪ್ರಧಾನಿ ಅಭ್ಯರ್ಥಿಗಳಾದ ನರೇಂದ್ರ ಮೋದಿ ಹಾಗೂ ರಾಹುಲ್‌ ಗಾಂಧಿನಡುವೆ ತುಲನೆ ಮಾಡಿ ಮಾತನಾಡುವ ಯುವಕರು ಇದ್ದಾರೆ. ಯಾವುದೇ ರಾಜಕೀಯ ಚಟುವಟಿಕೆಗಳು ಇಲ್ಲಿಂದಲೇ ಆರಂಭವಾಗುವ ಕಾರಣ ಯುವಕರ ಪಾಲ್ಗೊಳ್ಳುವಿಕೆ ಕೂಡ ಕಂಡು ಬರುತ್ತಿದೆ. ಆದರೆ, ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರು ಈವರೆಗೂ ಬಂದು ಪ್ರಚಾರ ನಡೆಸಿಲ್ಲ. ಹೀಗಾಗಿ ಪ್ರಚಾರದ ಅಬ್ಬರ ಅಷ್ಟಾಗಿ ಕಾಣುತ್ತಿಲ್ಲ....

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/hlkhxAAA

📲 Get Raichur News on Whatsapp 💬