[bagalkot] - ಜಾತಿ ಬಲದ ನಿರೀಕ್ಷೆಯಲ್ಲಿ ಕೈ-ಕಮಲ

  |   Bagalkotnews

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕರಾಗಿರುವ ಬಾದಾಮಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ಪ್ರತಿಷ್ಠೆಯಿಂದ ನಡೆದಿದೆ.

ಇಲ್ಲಿ ಪಕ್ಷಕ್ಕಿಂತ ಜಾತಿ ಆಧಾರದ ಮೇಲೆಯೇ ಈ ವರೆಗಿನ ಎಲ್ಲ ಚುನಾವಣೆ ನಡೆದಿವೆ. ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಸ್ಥಳೀಯರೆಂಬ ಪ್ರತಿಷ್ಠೆಯ ಜತೆಗೆ ಎಲ್ಲ ಪಕ್ಷಗಳಲ್ಲೂ ಸ್ನೇಹ ಬಳಗ ಹೊಂದಿದ್ದು, ಅದು ತಮಗೆ ಬಲ ಕೊಡಲಿದೆ ಎಂಬ ವಿಶ್ವಾಸದಲ್ಲಿದ್ದರೆ, ಜೆಡಿಎಸ್‌ ಮೈತ್ರಿಯೊಂದಿಗೆ ಸಿದ್ದರಾಮಯ್ಯ ಅವರ ಬಲದಿಂದ ಈ ಕ್ಷೇತ್ರದಲ್ಲಿ ಅತಿಹೆಚ್ಚು ಲೀಡ್‌ ಬರಲಿದೆ ಎಂಬ ನಿರೀಕ್ಷೆ ಕಾಂಗ್ರೆಸ್‌ ಹೊಂದಿದೆ.

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಶೇ.70.25ರಷ್ಟು ಮತದಾನವಾಗಿದೆ. ಕಳೆದ ಬಾರಿ ಇಲ್ಲಿ ಶೇ.66.54ರಷ್ಟು ಮತದಾನ ಮಾತ್ರ ಆಗಿತ್ತು.ಕಳೆದ ಬಾರಿಗಿಂತ ಶೇ.3.71ರಷ್ಟು ಮತದಾನ ಹೆಚ್ಚಳವಾಗಿದ್ದು, ಇದು ಬಿಜೆಪಿಗೆ ಲಾಭ ಎಂಬ ಲೆಕ್ಕಾಚಾರ ಆ ಪಕ್ಷದ್ದು. ಅಲ್ಲದೇ ಕಳೆದ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಒಟ್ಟು 2,03,125 ಮತದಾರರಿದ್ದು, ಅದರಲ್ಲಿ 1,35,153 (ಶೇ.66.54) ಜನರು ಹಕ್ಕು ಚಲಾಯಿಸಿದ್ದರು. ಆಗ ಇಲ್ಲಿ ಬಿಜೆಪಿ 73,128 ಮತ ಪಡೆದಿದ್ದರೆ, ಕಾಂಗ್ರೆಸ್‌-54,261 ಮತ ಗಳಿಸಿತ್ತು....

ಫೋಟೋ - http://v.duta.us/7vuwOgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/pOMlVQAA

📲 Get Bagalkot News on Whatsapp 💬