[bangalore-city] - ಬಿಎಂಟಿಸಿಗೆ ಲಾಭವಾದ ಚುನಾವಣೆ

  |   Bangalore-Citynews

ಬೆಂಗಳೂರು: ಲೋಕಸಭಾ ಚುನಾವಣೆಯಿಂದ ಅಭ್ಯರ್ಥಿಗಳಿಗೆ ಹಾಗೂ ಮತದಾರರಿಗೆ ಎಷ್ಟರಮಟ್ಟಿಗೆ ಲಾಭ ಆಗಿದೆಯೋ ಗೊತ್ತಿಲ್ಲ. ಆದರೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪಾಲಿಗೆ ಮಾತ್ರ ಹಿಂದೆಂದಿಗಿಂತ ಲಾಭವಾಗಿದೆ!

ಹೌದು, ರಾಜ್ಯದಲ್ಲಿ ಏಪ್ರಿಲ್‌ 18ರಂದು ನಡೆದ ಮೊದಲ ಹಂತದ ಚುನಾವಣೆ ವೇಳೆ ಕೇವಲ ಎರಡು ದಿನ (ಏ. 17 ಮತ್ತು 18)ಗಳಲ್ಲಿ ಬಿಎಂಟಿಸಿಗೆ ಮೂರೂವರೆ ಕೋಟಿ ರೂ. ಹರಿದುಬಂದಿದೆ. ಹಿಂದಿನ 2014ರ ಲೋಕಸಭಾ ಮತ್ತು 2018ರ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ, ಅತಿ ಹೆಚ್ಚು ಲಾಭ ಇದಾಗಿದೆ. ಹಾಗಾಗಿ, ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಈ ಚುನಾವಣೆಯು ಕೊಂಚ ನಿರಾಳಭಾವ ಮೂಡಿಸಿದೆ.

ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣಾ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕೊಂಡೊಯ್ಯಲು ಮತ್ತು ವಾಪಸ್‌ ಕರೆತರಲು ಎರಡು ದಿನಗಳ ಮಟ್ಟಿಗೆ ಬಿಎಂಟಿಸಿಯಿಂದ 1,700 ಬಸ್‌ಗಳನ್ನು ಚುನಾವಣಾ ಆಯೋಗ ಗುತ್ತಿಗೆ ಪಡೆದಿತ್ತು. ಒಂದು ಬಸ್‌ಗೆ ಒಂದು ದಿನಕ್ಕೆ 10 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಇದರಿಂದ ಒಟ್ಟಾರೆ 3.40 ಕೋಟಿ ರೂ. ಆದಾಯ ಹರಿದುಬಂದಿದೆ.

2014ರ ಲೋಕಸಭಾ ಚುನಾವಣೆಯಲ್ಲಿ 1,053 ಬಸ್‌ಗಳನ್ನು ಪಡೆಯಲಾಗಿತ್ತು. ಇದರಿಂದ ಪ್ರತಿ ಬಸ್‌ಗೆ 8,600 ರೂ. ಬಾಡಿಗೆಯಂತೆ 90.55 ಲಕ್ಷ ರೂ. ಬಂದಿತ್ತು. ಇನ್ನು ಕಳೆದ ವಿಧಾನಸಭಾ ಚುನಾವಣೆ ವೇಳೆ 1,500 ಬಸ್‌ಗಳನ್ನು ಬಾಡಿಗೆ ಪಡೆಯಲಾಗಿತ್ತು. ಸುಮಾರು ಮೂರು ಕೋಟಿ ರೂ. ಆದಾಯ ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ....

ಫೋಟೋ - http://v.duta.us/y5ZcKQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/GSczkwAA

📲 Get Bangalore City News on Whatsapp 💬