[bangalore-city] - ಯಲ್ಲಮ್ಮ ದೇವಿಯ ವೈಭವದ ಕರಗ ಶಕ್ತ್ಯೋತ್ಸವ

  |   Bangalore-Citynews

ಕೆಂಗೇರಿ: ಐತಿಹಾಸಿಕ ಕೆಂಗೇರಿ ಶ್ರೀ ಯಲ್ಲಮ್ಮ ದೇವಿಯ 45ನೇ ಕರಗ ಶಕ್ತ್ಯೋತ್ಸವವು ಶನಿವಾರ ತಡರಾತ್ರಿ, ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು.

ಶನಿವಾರ ರಾತ್ರಿ 1.35ಕ್ಕೆ ಸರಿಯಾಗಿ ಕರಗವನ್ನು ಹೊತ್ತ ಪೂಜಾರಿ ಆನಂದ ಅವರು ದೇವಿಯ ಗರ್ಭಗುಡಿಯಿಂದ ಹೊರಬಂದರು. ಈ ಕ್ಷಣಕ್ಕಾಗಿ ಕಾಯುತ್ತಿದ್ದ ಸಹಸ್ರಾರು ಭಕ್ತರು ಗೋವಿಂದ ನಾಮಸ್ಮರಣೆ ಮಾಡುತ್ತಾ, ಮಲ್ಲಿಗೆ ಹೂಗಳನ್ನು ಚೆಲ್ಲುವ ಮೂಲಕ ಕರಗವನ್ನು ಬರಮಾಡಿಕೊಂಡರು.

ಕರಗವು ದೇವಾಲಯವನ್ನು ಮೂರು ಸುತ್ತು ಹಾಕಿ ಕೆಂಗೇರಿಯ ರಾಜಬೀದಿಗಳಲ್ಲಿ ಸಾಗಿತು. ನಂತರ, ಗ್ರಾಮದ ಗಾಣಿಗರ ಆಂಜನೇಯ ಸ್ವಾಮಿ ದೇವಾಲಯ, ಮುಸ್ಲಿಮರ ದರ್ಗಾ, ಮಾರಮ್ಮ, ಸೋಮೇಶ್ವರ, ಕೋಟೆ ಕರಗದಮ್ಮ, ಅಂಬಾ ಭವಾನಿ, ಕಸ್ತೂರಮ್ಮನ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳಿಗೆ ತೆರಳಿ ಪೂಜೆ ಸ್ವೀಕರಿಸಿತು.

ಬಳಿಕ, ಮೇಗಳ ಬೀದಿ, ಅಂಚೇಕೇರಿ, ಕೋಟೆ, ಲಿಂಗಾಯಿತರ ಬೀದಿ,ಬಾಪೂಜಿ ಕಾಲೋನಿ, ಕುವೆಂಪು ರಸ್ತೆ, ಕೆಂಗೇರಿ ಮಾರುಕಟ್ಟೆ ಮೂಲಕ ಸಾಗಿ, ಭಾನುವಾರ ಬೆಳಗ್ಗೆ 10 ಗಂಟೆಗೆ ದೇವಾಲಯ ತಲುಪಿತು. ಕರಗ ಮಹೋತ್ಸವದ ಅಂಗವಾಗಿ ಜಾನಪದ ಜಾತ್ರೆ ಹಮ್ಮಿಕೊಳ್ಳಲಾಗಿತ್ತು.

ಕೀಲು ಕುದುರೆ,ಪಟದ ಕುಣಿತ, ವೀರಗಾಸೆ, ಪೂಜಾ ಕುಣಿತ, ಚಂಡೆ ವಾದ್ಯ, ಡೊಳ್ಳು, ನಾದಸ್ವರ, ತಮಟೆ ವಾದ್ಯ ಕಲಾವಿದರ ಪ್ರದರ್ಶನ, ಮಂಗಳವಾದ್ಯ, ವಾದ್ಯಗೂಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆದವು. ಕರಗ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಕೆಂಗೇರಿ ಹೋಬಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿತ್ತು....

ಫೋಟೋ - http://v.duta.us/b7rxqAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/w_KurwAA

📲 Get Bangalore City News on Whatsapp 💬