[bangalore-rural] - ಶ್ರೀರಾಮಮೂರ್ತಿ ಶೋಭಾಯಾತ್ರೆ

  |   Bangalore-Ruralnews

ಹೊಸಕೋಟೆ: ನಗರದ ಹಿಂದೂ ಜಾಗ ರಣಾ ವೇದಿಕೆ ವತಿಯಿಂದ ಭಾನುವಾರ ಶ್ರೀರಾಮನ 16 ಅಡಿ ಎತ್ತರದ ಮೂರ್ತಿ ಶೋಭಾಯಾತ್ರೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ತಾಲೂಕಿನ ಸಹ ಸ್ರಾರು ಯುವಕರು ಪಾಲ್ಗೊಂಡಿದ್ದರು. ನಗರದ ಪ್ರಮುಖ ರಸ್ತೆಗಳುದ್ದಕ್ಕೂ ಕೇಸರಿ ಬಣ್ಣದ ಬಾವುಟ ಅಳವಡಿಸಲಾಗಿತ್ತು.

ವಿಶ್ವೇಶ್ವರಯ್ಯ ಬಡಾವಣೆಯ ವಿವೇಕಾ ನಂದ ಶಾಲೆಯ ಮುಂಭಾಗದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಿಸಿಲಿನಿಂದ ದಣಿವಾರಿಸಿಕೊಳ್ಳಲು ಮಾರ್ಗದುದ್ದಕ್ಕೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯುವಕ ರಿಗೆ ಭಕ್ತಾದಿಗಳು ಮಜ್ಜಿಗೆ, ಪಾನಕ ವಿತರಿ ಸಿದರು. ನಗರದ ಹಳೇ ಬಸ್‌ ನಿಲ್ದಾಣ ದಲ್ಲಿ ಮುಸ್ಲಿಂ ಬಾಂಧವರು ಸಹ ಮಜ್ಜಿಗೆ, ನಿಂಬೆ ಹಣ್ಣಿನ ಪಾನಕ ನೀಡುವ ಮೂಲಕ ಸೌಹಾರ್ದತೆ ಮೆರೆದರು.

ಜಿಕೆಬಿಎಂಎಸ್‌ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ದೊಡ್ಡ ಬಳ್ಳಾಪುರದ ತಪಸಿಹಳ್ಳಿಯ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯಜ್ಞಾನಾನಂದ ಸ್ವಾಮೀಜಿ, ಹಿಂದೂ ಜಾಗರಣಾ ವೇದಿಕೆ ಯ ಕರ್ನಾಟಕ ಉತ್ತರ, ದಕ್ಷಿಣ ಪ್ರಾಂತ ಗಳ ಪ್ರಮುಖ್‌ ಜಿ.ಮನಿಯಪ್ಪ, ನಗರದ ಹಿಂದೂ ಜಾಗರಣಾ ವೇದಿಕೆ ಪದಾಧಿ ಕಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ನಗರದ ಜೆ.ಸಿ.ವೃತ್ತದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಫೋಟೋ - http://v.duta.us/2oLnoAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/9MHISwAA

📲 Get Bangalore Rural News on Whatsapp 💬