[bellary] - ವಿಜಯನಗರ ಕ್ಷೇತ್ರದಲ್ಲಿ ಯಾರಿಗೆ ಮುನ್ನಡೆ

  |   Bellarynews

ಬಳ್ಳಾರಿ: ಬಳ್ಳಾರಿ ಲೋಕಸಭೆ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಮುಗಿದಿದ್ದು, ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಭದ್ರವಾಗಿದೆ. ಫಲಿತಾಂಶಕ್ಕೆ ಇನ್ನು 25 ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ? ಎಷ್ಟೆಲ್ಲ ಲೀಡ್‌ ಸಿಗಬಹುದು? ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಗೆದ್ದಿದ್ದ ಕಾಂಗ್ರೆಸ್‌ ಪಕ್ಷಕ್ಕೆ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ಮನ್ನಣೆ ನೀಡಲಿದ್ದಾರೆಯೇ? ಅಥವಾ ಬಿಜೆಪಿಗೆ ಲೀಡ್‌ ದೊರೆಯಲಿದೆಯಾ ಎಂಬ ಭಾಗಾಕಾರ, ಗುಣಾಕಾರ ಲೆಕ್ಕಗಳು ಶುರುವಾಗಿವೆ.

ಕ್ಷೇತ್ರ ಮರುವಿಂಗಡಣೆಯಾದ 2008ರಲ್ಲಿ ಹೊಸಪೇಟೆಯನ್ನು ವಿಜಯನಗರ ವಿಧಾನಸಭಾ ಕ್ಷೇತ್ರವನ್ನಾಗಿ ಪರಿವರ್ತಿಸಲಾಯಿತು. ಸತತ ಎರಡು ಬಾರಿ ಯಾರಿಗೂ ಗೆಲುವು ಒಲಿಯದ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ಆನಂದ್‌ಸಿಂಗ್‌ 2 ಬಾರಿ ಬಿಜೆಪಿ, ಒಮ್ಮೆ ಕಾಂಗ್ರೆಸ್‌ನಿಂದ ಸತತವಾಗಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದರು. ಬಿಜೆಪಿಯಿಂದ ಗೆದ್ದ ಎರಡು ಬಾರಿ 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದ ಆನಂದ್‌ಸಿಂಗ್‌ಗೆ ಮೂರನೇ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದಾಗ ಕ್ಷೇತ್ರದ ಮತದಾರರು ಗೆಲುವಿನ ಅಂತರ ಕಡಿತಗೊಳಿಸಿ ಆನಂದ್‌ಸಿಂಗ್‌ಗೆ ಶಾಕ್‌ ನೀಡಿದರು. ಶೇ.74.04 ರಷ್ಟು ಮತದಾನವಾಗಿದ್ದು, ಕಾಂಗ್ರೆಸ್‌ನ ಆನಂದ್‌ಸಿಂಗ್‌, ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಎಚ್.ಆರ್‌.ಗವಿಯಪ್ಪರಿಗಿಂತ 8228 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಈ ಅಂತರವನ್ನು ಸ್ವತಃ ಆನಂದ್‌ಸಿಂಗ್‌ ಅವರಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಕಳೆದ ಬಳ್ಳಾರಿ ಲೋಕಸಭೆ ಉಪ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಶೇ.61.25ರಷ್ಟು ಮತದಾನವಾಗಿದ್ದು, ಬಿಜೆಪಿಗಿಂತ ಕಾಂಗ್ರೆಸ್‌ಗೆ 27 ಸಾವಿರ ಲೀಡ್‌ ಲಭಿಸಿ ಒಂದಷ್ಟು ಸಮಾಧಾನ ಮೂಡಿಸಿತ್ತು. ಆದರೆ, ಇದೀಗ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಹೀಗೆ ಏರಿಳಿತ ಮುಂದುವರಿಯಲಿದೆಯೇ ಅಥವಾ ಮತದಾರರು ಬದಲಾವಣೆ ಬಯಸಿದ್ದಾರೆಯೇ? ಎಂಬುದು ಸದ್ಯದ ಮಟ್ಟಿಗೆ ಕುತೂಹಲ ಮೂಡಿಸಿದೆ....

ಫೋಟೋ - http://v.duta.us/fPUNhgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/iQV4hwAA

📲 Get Bellary News on Whatsapp 💬