[bidar] - ಶಿಕ್ಷಕರ ಬಡಾವಣೆ ರಸ್ತೆ ಅವ್ಯವಸ್ಥೆ: ಸಂಚಾರಕ್ಕೆ ಸಮಸ್ಯೆ

  |   Bidarnews

ಹುಮನಾಬಾದ: ಬುದ್ಧಿ ಜೀವಿಗಳ ಬಡಾವಣೆ ಎಂದೇ ಹೇಳಲಾಗುವ ಪಟ್ಟಣದ ಹಣಕುಣಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಶಿಕ್ಷಕರ ಬಡಾವಣೆಯಲ್ಲಿ ಮೂಲ ಸೌಲಭ್ಯವಿಲ್ಲದ ಕಾರಣ ನಿವಾಸಿಗಳ ಮನೆ ತ್ಯಾಜ್ಯ ರಸ್ತೆಯಲ್ಲೇ ಸಂಗ್ರಹವಾಗಿ ಜನ ಮತ್ತು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.

ಹಣಕುಣಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಮೊಟ್ಟ ಮೊದಲು ಹುಟ್ಟಿಕೊಂಡದ್ದೇ ಶಿಕ್ಷಕರ ಬಡಾವಣೆ. ಸಿಸಿ ರಸ್ತೆ ನಿರ್ಮಿಸಿದ್ದ ಜಾಗದಲ್ಲಿ ಒಳ ಚರಂಡಿ ನಿರ್ಮಿಸುವ ಉದ್ದೇಶದಿಂದ ಅಗೆದ ರಸ್ತೆಯನ್ನು ನಾಲ್ಕೈದು ವರ್ಷಗಳಿಂದ ದುರಸ್ತಿಗೊಳಿಸಿಲ್ಲ. ಇರುವ ಚರಂಡಿಗಳೆಲ್ಲವೂ ಮಣ್ಣಿನಲ್ಲಿ ಮುಚ್ಚಿಹೋಗಿವೆ. ಪರ್ಯಾಯ ವ್ಯವಸ್ಥೆ ಇಲ್ಲದೇ ನಿವಾಸಿಗಳ ಮನೆಯ ತ್ಯಾಜ್ಯ ರಸ್ತೆಯಲ್ಲೇ ಸಂಗ್ರಹವಾಗುತ್ತಿದೆ.

ಕಲ್ಲೂರ ಮುಖ್ಯ ರಸ್ತೆಯಿಂದ ಹಣಕುಣಿ ಮಾರ್ಗಕ್ಕೆ ತೆರಳುವ ಈ ರಸ್ತೆಯಲ್ಲಿ ಎರಡು ದೊಡ್ಡ ಗಾತ್ರದ ಇಳಿಜಾರು ಪ್ರದೇಶ ಇವೆ. ರಸ್ತೆಯಲ್ಲಿ ಬೃಹತ್‌ ಗಾತ್ರದ ಗುಂಡಿಗಳು ಬಿದ್ದಿರುವ ಕಾರಣ ಇಲ್ಲಿ ನಿತ್ಯ ಅದೆಷ್ಟೋ ಜನ ವಾಹನ ಸಮೇತ ಬಿದ್ದು ಗಾಯಗೊಂಡಿದ್ದಾರೆ. ಶೀಘ್ರದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಿಸಿ ಸಮಸ್ಯೆ ಬಗೆಹರಿಸುವಂತೆ ವಿವಿಧ ಹಂತದ ಚುನಾಯಿತ ಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ....

ಫೋಟೋ - http://v.duta.us/eDHo-QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/QGU8qQAA

📲 Get Bidar News on Whatsapp 💬