[bijapur-karnataka] - ನೀರಿಲ್ಲದೆ ಒಣಗುತ್ತಿದೆ ಉದ್ಯಾನ

  |   Bijapur-Karnatakanews

ಬಸವನಬಾಗೇವಾಡಿ: ಪಟ್ಟಣದ ಮೂಲ ನಂದೀಶ್ವರ ದೇವಸ್ಥಾನದ ಉದ್ಯಾನದಲ್ಲಿ ಬಿಡ ಮರಗಳು ನೀರಿಲ್ಲದೆ ಒಣಗುತ್ತಿರುವುದು ಬಸವಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಐತಿಹಾಸಿಕ ಹಿನ್ನೆಲೆ ಹೊಂದಿರುವ‌ ಮೂಲ ನಂದೀಶ್ವರ ದೇವಸ್ಥಾನ ಸುತ್ತ ಸುಮಾರು 2ರಿಂದ 3 ಎಕರೆ ವಿಸ್ತಾರ ತೋಟವಿದೆ. ಈ ತೋಟದಲ್ಲಿ ಸುಮಾರು 60-70 ಅಡಿ ಆಳದ ಬಾವಿಯಿದ್ದು ಇದರಿಂದಲೇ ದೇವರ ಪೂಜೆ ಹಾಗೂ ತೋಟದಲ್ಲಿನ ತೆಂಗಿನ ಮರಗಳಿಗೆ ಮತ್ತು ಉದ್ಯಾನಕ್ಕೆ ನೀರು ಪೂರೈಸಲಾಗುತ್ತಿತ್ತು. ಆದರೆ ಕಳೆದ 5-6 ವರ್ಷದಿಂದ ವರುಣ ಮುನಿಸಿಕೊಂಡಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಪ್ರತಿ ವರ್ಷ ನೀರು ಕಡಿಮೆಯಾಗುತ್ತ ಬಂದಿದೆ. ಈ ವರ್ಷ ಬಾವಿ ಸಂಪೂರ್ಣ ಬತ್ತಿದ್ದು ಹನಿ ನೀರಿಗೂ ಪರದಾಡುವಂತಾಗಿದೆ.

ಈ ಹಿಂದೆ ಮೂಲ ನಂದೀಶ್ವರ ದೇವಸ್ಥಾನ ಉಸ್ತುವಾರಿ ಸ್ಥಳೀಯ ಆಡಳಿತ ಮಂಡಳಿ ನೋಡಿಕೊಳ್ಳುತ್ತಿತ್ತು. 2001-02ರಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿಯಲ್ಲಿ ಈ ದೇವಸ್ಥಾನ ಸೇರ್ಪಡೆಗೊಂಡ ಬಳಿಕ 2005ರಲ್ಲಿ ದೇವಸ್ಥಾನ ಪುನರ್‌ ಜೀರ್ಣೋದ್ಧಾರ ಮಾಡಿ ಹೂ ಹಾಗೂ ಅಲಂಕೃತ ಗಿಡ ಬೆಳೆಸಿ ದೇವಸ್ಥಾನಕ್ಕೆ ಹೊಸ ರೂಪ ನೀಡಲಾಗಿತ್ತು.

ದೇವಸ್ಥಾನ ಹಿಂಬದಿಯಲ್ಲಿರುವ 1ರಿಂದ 2 ಎಕರೆ ಜಮೀನಿನಲ್ಲಿ ಈ ಹಿಂದೆ ದೇವಾಲಯ ಆಡಳಿತ ಮಂಡಳಿಯವರು ನೂರಾರು ತೆಂಗಿನ ಸಸಿ ನೆಟ್ಟಿದ್ದರು. ನಂತರ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಮಂಡಳಿ ವಿಶಾಲವಾದ ಬಾವಿ ಹಾಗೂ ತೆಂಗಿನ ತೋಟದಲ್ಲಿ ಉದ್ಯಾನ ನಿರ್ಮಿಸಿತು. ಇದರಿಂದ ಪ್ರವಾಸಿಗರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಉದ್ಯಾನ ಅನುಕೂಲವಾಗಿತ್ತು. ಆದರೆ ಈ ವರ್ಷ ಭೀಕರ ಬರಗಾಲದಿಂದ ಉದ್ಯಾನ ಮತ್ತು ದೇವಾಲಯ ಸುತ್ತ ಮುತ್ತ ಹೂವಿನ ಗಿಡ ಹಾಗೂ ಅಲಂಕೃತ ಗಿಡಗಳು ಒಣಗುತ್ತಿದ್ದು ದೇವಸ್ಥಾನ ಸೌಂದರ್ಯ ಕ್ಷೀಣಿಸುತ್ತಿದೆ....

ಫೋಟೋ - http://v.duta.us/vn1ZLQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/UgwzdQAA

📲 Get Bijapur Karnataka News on Whatsapp 💬