[chamarajanagar] - ಪ್ರಬುದ್ಧ ಭಾರತ ನಿರ್ಮಾಣ ಇಂದಿನ ಅಗತ್ಯ

  |   Chamarajanagarnews

ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌. ಅಂಬೇಡ್ಕರ್‌ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಎಲ್ಲರೂ ನಡೆದು ಪ್ರಬುದ್ದ ಭಾರತ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ. ಹೇಮಂತ್‌ ಕುಮಾರ್‌ ಹೇಳಿದರು.

ತಾಲೂಕಿನ ಬೇಡರಪುರ ಸಮೀಪವಿರುವ ಮೈಸೂರು ವಿಶ್ವವಿದ್ಯಾನಿಲಯದ ಸುವರ್ಣ ಗಂಗೋತ್ರಿ ಡಾ.ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ನಡೆದ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಹಾಗೂ ಆಕೃತಿ -2019ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ನಮ್ಮದು ಎಂಬ ರಾಷ್ಟ್ರ ಪ್ರೇಮವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಿದೆ. ದೇಶದಲ್ಲಿ ವರ್ಷಪೂರ್ತಿ ಸ್ಮರಣೆ ಮಾಡುವ ವ್ಯಕ್ತಿ ಇದ್ದರೆ ಅದು ಅಂಬೇಡ್ಕರ್‌ ಮಾತ್ರ. ಅಂಬೇಡ್ಕರ್‌ ಜಯಂತಿ, ಅಂಬೇಡ್ಕರ್‌ ಪರಿನಿಬ್ಟಾಣ ದಿನ, ಅವರು ಬೌದ್ಧ ಧರ್ಮಕ್ಕೆ ಸೇರಿದ ದಿನ, ಪುಸ್ತಕ ದಿನ, ಜ್ಞಾನ ದಿನ, ಸಂವಿಧಾನ ಅಂಗೀಕಾರವಾದ ದಿನ ಸೇರಿದಂತೆ ಹಲವಾರು ದಿನಗಳನ್ನು ಆಚರಿಸುವ ಮೂಲಕ ಅಂಬೇಡ್ಕರ್‌ ಸ್ಮರಣೆ ವರ್ಷಪೂರ್ತಿ ಮಾಡಲಾಗುತ್ತಿದೆ. ಅಲ್ಲದೇ ವಿಚಾರ ಸಂಕಿರಣಗಳನ್ನು ನಡೆಸಿ ಶ್ಲಾಘನೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ದೇಶದಲ್ಲಿ ಶೇ. 3ರಷ್ಟು ಶಿಕ್ಷಣ ಪ್ರಮಾಣವಿದ್ದಾಗ ವಿಶ್ವದ ಹಲವಾರು ದೇಶಗಳ ಸಂವಿಧಾನವನ್ನು ಕರಗತ ಮಾಡಿಕೊಂಡು ಆಧುನಿಕ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿಕೊಟ್ಟ ಮಹಾನ್‌ ಜ್ಞಾನಿ ಅಂಬೇಡ್ಕರ್‌. ದೇಶದ ಜನರಿಗಾಗಿ ಮತದಾನದ ಹಕ್ಕು, ಶಿಕ್ಷಣದ ಹಕ್ಕು, ಉದ್ಯೋಗದ ಹಕ್ಕು, ರಾಜಕೀಯ ಹಕ್ಕು , ಮಹಿಳೆಯರಿಗೆ ಸಮಾನತೆಯ ಹಕ್ಕುಗಳ ಕೊಡುಗೆಯನ್ನು ನೀಡಿದ್ದಾರೆ....

ಫೋಟೋ - http://v.duta.us/qjKKiwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/81vhlgAA

📲 Get Chamarajanagar News on Whatsapp 💬