[chikkamagaluru] - ಹೆಬ್ಬೆಯಲ್ಲಿ ಭವಾನಿಶಂಕರಸ್ವಾಮಿ ಜಾತ್ರಾ ಸಂಭ್ರಮ

  |   Chikkamagalurunews

ಎನ್‌.ಆರ್‌.ಪುರ: ತಾಲೂಕಿನ ಹೆಬ್ಬೆ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ಹೆಬ್ಬೆಭವಾನಿ ಶಂಕರೇಶ್ವರ ಸ್ವಾಮಿ ರಥೋತ್ಸವವು ಸೋಮವಾರದಿಂದ ಆರಂಭವಾಗಲಿದ್ದು, 30ರಂದು ರಥೋತ್ಸವ ನಡೆಯಲಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಅಭಯಾರಣ್ಯಗಳಲ್ಲಿ ತಾಲೂಕಿನ ವ್ಯಾಪ್ತಿಯ ಹೆಬ್ಬೆ ಅಭಯಾರಣ್ಯವೂ ಒಂದಾಗಿದ್ದು, ಅರಣ್ಯ ಹಾಗೂ ವನ್ಯಜೀವಿಗಳ ಸಂತತಿ ಅಳಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಈ ಅಭಯಾರಣ್ಯದಲ್ಲಿ ಆನೆ, ಹುಲಿ, ಜಿಂಕೆ ಮತ್ತಿತ್ತರ ಪ್ರಾಣಿ ಸಂಕುಲ ಮತ್ತು ಹರಿದ್ವರ್ಣ ಕಾಡು ಇಲ್ಲಿದೆ. ಇಂತಹ ಪ್ರಕೃತಿದತ್ತವಾದ ಪ್ರದೇಶದ ಮಧ್ಯದಲ್ಲಿರುವ ದೇವಸ್ಥಾನವೊಂದು ಎಲ್ಲರನ್ನು ಆಕರ್ಷಿಸುತ್ತದೆ.

ಈ ಅಭಯಾರಣ್ಯದ ನಡುವಿನ ಹೇರಂಭ ಕ್ಷೇತ್ರದಲ್ಲಿರುವುದು ಹೆಬ್ಬೆಭವಾನಿಶಂಕರ ಸ್ವಾಮಿ ದೇವಸ್ಥಾನ. ಇಲ್ಲಿರುವ ದೇವರು ಭೂಮಿಯಿಂದ ಉದ್ಭವಾದ ಲಿಂಗವಾಗಿದ್ದು, ಭದ್ರಾ ನದಿಯ ದಡದಲ್ಲಿರುವ ಕಳಸ, ಖಾಂಡ್ಯ, ಹೆಬ್ಬೆ, ಸೋಂಪುರ ಎಂಬ ಪಂಚಲಿಂಗಗಳಲ್ಲಿ ಇದು ಒಂದಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಹಲವು ಪ್ರತೀತಿಗಗಳಿವೆ.

ಹಿಂದೆ ಈ ಕ್ಷೇತ್ರದಲ್ಲಿ ಹೇರಂಭ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಇದಕ್ಕೆ ಹೇರಂಭ ಎಂಬ ಹೆಸರು ಬಂತು ನಂತರ ಹೆಬ್ಬೆ ಆಯಿತು.ಅಲ್ಲದೇ ಅಗಸ್ತ್ಯ ಮುನಿಗಳು ಇದನ್ನು ಸ್ಥಾಪಿಸಿದರೆಂದು ತಿಳಿದುಬರುತ್ತದೆ. ಹಿಂದಿನ ಕಾಲದಲ್ಲಿ ಮಹಾಶಿವರಾತ್ರಿಯಂದು ವಿಜೃಂಭಣೆಯ ರಥೋತ್ಸವ ನಡೆಯುತ್ತಿತ್ತು....

ಫೋಟೋ - http://v.duta.us/_qWaVwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/goX3FQAA

📲 Get Chikkamagaluru News on Whatsapp 💬