[chitradurga] - ಖಂಡೇನಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ!

  |   Chitradurganews

ಚಿತ್ರದುರ್ಗ: ಆಂಧ್ರ ಗಡಿಭಾಗದ ಗ್ರಾಪಂ ಕೇಂದ್ರ ಸ್ಥಾನದ ಖಂಡೇನಹಳ್ಳಿಯಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಜನರು ನೀರಿಗಾಗಿ ಹೈರಾಣಾಗಿದ್ದಾರೆ.

ಜಿಲ್ಲೆಯ ಗಡಿ ಗ್ರಾಮ ಇದಾಗಿದ್ದು ಆಂಧ್ರದ ಪ್ರದೇಶದ ಅಗ್ರಹಾರ ಎನ್ನುವ ಹಳ್ಳಿಯಿಂದ ನಿತ್ಯ ಕುಡಿಯುವ ನೀರು ತರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಖಂಡೇನಹಳ್ಳಿಯಿಂದ ಮೂರು ಕಿಲೋ ಮೀಟರ್‌ ದೂರದಲ್ಲಿರುವ ಅಗ್ರಹಾರ ಗ್ರಾಮದ ಜನತೆ ಯಾವುದೇ ಭೇದ ತೋರದೆ ಸಹೋದರಂತೆ ನೀರು ನೀಡುತ್ತಿದ್ದಾರೆ. ಆದರೂ ಹೊರ ರಾಜ್ಯಕ್ಕೆ ಹೋಗಿ ನೀರು ತರುವುದು ಎಷ್ಟು ಸೂಕ್ತ ಎನ್ನುವ ಭಾವನೆ ಜನರಲ್ಲಿ ಕಾಡುತ್ತಿದೆ. ಖಂಡೇನಹಳ್ಳಿ ಪಾಳ್ಯ, ಮದ್ದಿಹಳ್ಳಿ, ಹಲಗಲದ್ದಿ, ಹೊಸಕೆರೆ ಗ್ರಾಮಗಳಿಂದಲೂ ಜನರು ನೀರು ತರುತ್ತಿದ್ದಾರೆ.

ಬತ್ತಿದ ಕೊಳವೆಬಾವಿಗಳು: ಗ್ರಾಮದಲ್ಲಿದ್ದ 8 ಕೊಳವೆ ಬಾವಿಗಳು ಬತ್ತಿ ಹೋಗಿವೆ. ಶುದ್ಧ ಕುಡಿಯುವ ನೀರಿನ ಘಕದ ಕೊಳವೆ ಬಾವಿ ಕೂಡ ಒಣಗಿ ಹೋಗಿದೆ. ಸ್ಥಳೀಯ ಗ್ರಾಪಂ ಆಡಳಿತ ನೀರು ನೀಡದೇ ಕೈಕಟ್ಟಿ ಕೂತಿಲ್ಲ. ಇತ್ತೀಚೆಗೆ ಎರಡು ಕೊಳವೆ ಬಾವಿ ಕೊರೆಯಲಾಯಿತು. ಅದರಲ್ಲಿ ಒಂದು ಕೊಳವೆ ಬಾವಿ ವಿಫಲವಾಯಿತು. ಇನ್ನೊಂದರಲ್ಲಿ ಅರ್ಧ, ಮುಕ್ಕಾಲಿಂಚು ನೀರು ಬರುತ್ತಿದೆಯಾದರೂ ಗ್ರಾಮದಲ್ಲಿರುವ ನಾಲ್ಕು ಸಾವಿರ ಜನಸಂಖ್ಯೆಗೆ ಸಾಕಾಗುತ್ತಿಲ್ಲ....

ಫೋಟೋ - http://v.duta.us/vcEF-AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/pqJ7VQAA

📲 Get Chitradurga News on Whatsapp 💬