[chitradurga] - ಚಿತ್ರನಾಯಕನಹಳ್ಳಿ ದೇವರ ಎತ್ತುಗಳ ರಕ್ಷಣೆಗೇಕೆ ನಿರ್ಲಕ್ಷ್ಯ?

  |   Chitradurganews

ಚಳ್ಳಕೆರೆ: ತಾಲೂಕಿನ ತಳಕು ಹೋಬಳಿಯ ಚಿತ್ರನಾಯಕನಹಳ್ಳಿ ಗ್ರಾಮವೂ ಆಂಧ್ರ ಪ್ರದೇಶದ ಗಡಿಭಾಗಕ್ಕೆ ಕೇವಲ 10 ಕಿ.ಮೀ ದೂರದಲ್ಲಿದ್ದು, ಕಳೆದ ಕೆಲವು ವರ್ಷಗಳಿಂದ ಮಳೆ ಇಲ್ಲದೆ ಇಲ್ಲಿನ ರೈತ ಸಮುದಾಯ ಬರಕ್ಕೆ ತುತ್ತಾಗಿದ್ದರಿಂದ ದೇವರ ಎತ್ತುಗಳಿಗೆ ಮೇವು ಇಲ್ಲದೆ ಬಳಲುತ್ತಿವೆ.

ಚಿತ್ರನಾಯಕನಹಳ್ಳಿ ಗ್ರಾಮದ ದೇವರ ಹೆಸರಿನಲ್ಲಿ ಬಿಟ್ಟಿರುವ 40 ಎತ್ತುಗಳಿಗೆ ಈಗ ನೀರು ಹಾಗೂ ಮೇವಿನ ಅಭಾವ ಉಂಟಾಗಿದೆ. ದೇವರ ಎಲ್ಲಾ ಎತ್ತುಗಳು ಎರಡು ಹೊತ್ತು ಮೇವು ಸಿಗದೆ ನಿತ್ರಾಣಗೊಂಡಿದ್ದು, ಸಾಯುವ ಸ್ಥಿತಿ ತಲುಪಿವೆ.

ದೇವರ ಎತ್ತುಗಳಿಗೆ ಮೇವು, ನೀರು ಕೊರತೆ ಕುರಿತು ಮಾತನಾಡಿದ ಈ ಭಾಗದ ರೈತ, ಕೃಷಿ ಸಲಹೆಗಾರ ಪಾಂಡುರಂಗಪ್ಪ, ಆಂಧ್ರ ಪ್ರದೇಶದ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ದೇವರ ಎತ್ತುಗಳನ್ನು ಸಂರಕ್ಷಿಸಲು ಆಗುತ್ತಿಲ್ಲ. ಕಾರಣ ಈ ಎತ್ತುಗಳಿಗೆ ಮೇವು ಪೂರೈಸುವಂತೆ ಗ್ರಾಮದ ಹಲವಾರು ರೈತರು ಜಿಲ್ಲಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಪ್ರತಿನಿತ್ಯ ಜಿಲ್ಲಾಡಳಿತ ಈ ಮೂಕ ಪ್ರಾಣಿಗಳ ಸಂರಕ್ಷಣೆಗೆ ಧಾವಿಸುತ್ತದೆಯೇ ಎಂಬ ಕಾತುರದಿಂದ ಎಲ್ಲ ರೈತರು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ....

ಫೋಟೋ - http://v.duta.us/dSGKiAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/8RJ_eAAA

📲 Get Chitradurga News on Whatsapp 💬