[dakshina-kannada] - ಅಡಿಕೆಗೆ ಕಲಬೆರಕೆಯ ಕರಾಮತ್ತು: ಸಂಕಷ್ಟದಲ್ಲಿ ಅಡಿಕೆ ಬೆಳೆ

  |   Dakshina-Kannadanews

ವಿಟ್ಲ: ಕೊಳೆ ರೋಗ, ಹಳದಿ ರೋಗದಿಂದ ತತ್ತರಿಸಿರುವ ಅಡಿಕೆ ಬೆಳೆಗೆ ಈಗ ಕಳಪೆ ಗುಣಮಟ್ಟದ ಕಲಬೆರಕೆ ಅಡಿಕೆಯ ಅಪಾಯ ಎದುರಾಗಿದೆ. ವಿದೇಶದಿಂದ ಕಡಿಮೆಬೆಲೆಗೆ ಕಳಪೆ ಗುಣಮಟ್ಟದ ಅಡಿಕೆಯನ್ನು ಆಮದು ಮಾಡಿ ಕೊಂಡು ಸ್ಥಳೀಯ ಅತ್ಯುತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಕಲಬೆರಕೆ ಮಾಡಿ ಇಡೀ ಅಡಿಕೆಯ ಮೌಲ್ಯವನ್ನೇ ಕಡಿಮೆಗೊಳಿಸುವ ವ್ಯವಸ್ಥಿತ ತಂತ್ರ ಬೆಳಕಿಗೆ ಬಂದಿದೆ. ಈ ದಂಧೆ ಹೊಸದಲ್ಲವಾದರೂ ಸಣ್ಣ ಮಟ್ಟದಲ್ಲಿತ್ತು. ಆದರೀಗ ಕರಾವಳಿ ಅಡಿಕೆ ಮಾರುಕಟ್ಟೆಯನ್ನು ತಲ್ಲಣಗೊಳಿಸುವಷ್ಟು ಬೆಳೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ದ.ಕ. ಜಿಲ್ಲೆಯ ಬೆಳೆಗಾರರದ್ದು, ಜಿಲ್ಲೆಯ ಸುಮಾರು 39 ಸಾವಿರ ಹೆಕ್ಟೇರ್‌ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

ವಾಸ್ತವ

ವಾಗಿ ವಿಟ್ಲ – ಬಾಯಾರು – ಬದಿಯಡ್ಕ ಪ್ರದೇಶದ ಅಡಿಕೆಗೆ ಬೇಡಿಕೆ ಹೆಚ್ಚು. ಈ ಪ್ರದೇಶದ ಅಡಿಕೆಯನ್ನು ಪ್ರತ್ಯೇಕಿಸಿ ಮಾರುಕಟ್ಟೆಯಲ್ಲಿ ವಿಶೇಷ ಮೌಲ್ಯ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿಯೇ ಸಂಪೂರ್ಣ ಬದಲಾಗುತ್ತಿದೆ.

ಮಾರುಕಟ್ಟೆ ಬೀಳಿಸುವ ತಂತ್ರ

ವಿದೇಶಿ ಒಪ್ಪಂದಗಳನ್ನು ದುರುಪಯೋಗ ಪಡಿಸಿಕೊಳ್ಳುವ ದಂಧೆಕೋರರು ನೇಪಾಲ, ಶ್ರೀಲಂಕಾ, ಬಾಂಗ್ಲಾದೇಶ ಮೂಲಕ ಬರ್ಮಾ – ಇಂಡೋನೇಶಿಯಾಗಳಲ್ಲಿ ಬೆಳೆಯುವ ಕೆಳದರ್ಜೆಯ ಅಡಿಕೆಯನ್ನು ಕರಾವಳಿಗೆ ತರಿಸಿಕೊಳ್ಳುತ್ತಿದ್ದಾರೆ. ಕೆಜಿಗೆ 145 ರೂ.ಗಳಿಗೆ ಸಿಗುವ ಈ ಕಳಪೆ ದರ್ಜೆಯ ಅಡಿಕೆಯನ್ನು ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆ ಜತೆ ಮಿಶ್ರಣ ಮಾಡಲಾಗುತ್ತಿದೆ. ವ್ಯಾಪಾರಿಗಳು ಗಾರ್ಬಲ್‌ನಲ್ಲಿ ಎರಡನ್ನೂ ಮಿಶ್ರಗೊಳಿಸಿ,...

ಫೋಟೋ - http://v.duta.us/xPU_vAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/nvCHnAAA

📲 Get Dakshina Kannada News on Whatsapp 💬