[dakshina-kannada] - ಕುಕ್ಕೆ: ಕುಮಾರ ಸಂಸ್ಕಾರ ಆಂದೋಲನ ಯಶಸ್ವಿ

  |   Dakshina-Kannadanews

ಸುಬ್ರಹ್ಮಣ್ಯ ಎ. 28: ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಪ್ರಮುಖ ಎರಡು ಪುಣ್ಯ ನದಿಗಳ ಸಹಿತ ಕ್ಷೇತ್ರವನ್ನು ಸ್ವಚ್ಛಗೊಳಿಸುವ ಯುವ ಬ್ರಿಗೇಡ್‌ ಆಂದೋಲನ ‘ಕುಮಾರ ಸಂಸ್ಕಾರ’ ರವಿವಾರ ಯಶಸ್ವಿಯಾಗಿ ಪೂರ್ಣಗೊಂಡಿತು. ಕ್ಷೇತ್ರದ ಪ್ರಮುಖ ನದಿಗಳು ಸಹಿತ ಪರಿಸರದಲ್ಲಿ ಸ್ವಚ್ಛತಾ ಆಂದೋಲನದ ವೇಳೆ ಹತ್ತಕ್ಕೂ ಅಧಿಕ ಟನ್‌ ತ್ಯಾಜ್ಯ ಸಂಗ್ರಹವಾಗಿದೆ.

ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ ಯುವ ಬ್ರಿಗೇಡ್‌ ಕಾರ್ಯಕರ್ತರು ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಎರಡು ದಿನಗಳ ಕಾಲ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಹಾಗೂ ದರ್ಪಣತೀರ್ಥ ನದಿಗಳನ್ನು ಹಾಗೂ ದೇಗುಲದ ಪರಿಸರವನ್ನು ಸ್ವಚ್ಛಗೊಳಿಸಿದರು. ಸೋದರಿ ನಿವೇದಿತಾ ಪ್ರತಿಷ್ಠಾನ ಹಾಗೂ ನಮ್ಮ ಸುಬ್ರಹ್ಮಣ್ಯ ಯುವ ಸಂಘಟನೆಯ ಕಾರ್ಯಕರ್ತರು ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದರು.

ರವಿವಾರ ಬೆಳಗ್ಗೆ ದೇವಸ್ಥಾನದ ಸುತ್ತ ಮುತ್ತಲ ಪ್ರದೇಶ ಹಾಗೂ ರಥಬೀದಿಯಿಂದ ಕುಮಾರಧಾರಾ ತನಕ ಪ್ಲಾಸ್ಟಿಕ್‌ ಬಾಟಲಿ, ಬಟ್ಟೆ, ಗುಟ್ಕಾ ಚೀಟಿಗಳು ಇತ್ಯಾದಿ ಕಸ ಹೆಕ್ಕಿ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಸಾರ್ವಜನಿಕ ಸ್ಥಳ, ವಾಹನ ಪಾರ್ಕಿಂಗ್‌ ಹಾಗೂ ಮುಖ್ಯ ರಸ್ತೆಯಲ್ಲಿ ಬರುವ ಬಸ್‌ ತಂಗುದಾಣಗಳನ್ನು ಕಾರ್ಯಕರ್ತರು ತೊಳೆದು ಶುಚಿಗೊಳಿಸಿದರು....

ಫೋಟೋ - http://v.duta.us/-rDuHQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/gg7BKgAA

📲 Get Dakshina Kannada News on Whatsapp 💬