[dakshina-kannada] - ಕಟ್ಟಡ ನಿರ್ಮಾಣಕ್ಕೆ ನೀರು ಸ್ಥಗಿತ

  |   Dakshina-Kannadanews

ಮಹಾನಗರ : ತುಂಬೆ ವೆಂಟೆಡ್‌ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆ ಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ರಚನೆ ಉದ್ದೇಶಕ್ಕೆ ಬಳಸುವ ನೀರಿನ ಸಂಪರ್ಕವನ್ನು ಇದೀಗ ಸ್ಥಗಿತಗೊಳಿಸಲಾಗಿದೆ.

ನಿರ್ಮಾಣ ಕಟ್ಟಡಗಳ ಬಳಕೆಗೆಂದು ಮಹಾನಗರ ಪಾಲಿಕೆಯು ಪ್ರತ್ಯೇಕ ಪೈಪ್‌ಲೈನ್‌ ಮುಖೇನ ಪ್ರತೀ ದಿನ 6 ಮಿಲಿ ಯನ್‌ ಲೀಟರ್‌ ನೀರು ಸರಬರಾಜು ಮಾಡುತ್ತಿತ್ತು. ವಾಡಿಕೆಯಂತೆ ಮುಂಗಾರು ಆರಂಭಗೊಳ್ಳಲು ಇನ್ನೂ, ಸುಮಾರು ಒಂದು ತಿಂಗಳು ಬಾಕಿ ಇದೆ. ಮುಂಗಾರು ಪ್ರಾರಂಭವಾಗುವವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಾರದು ಎಂಬ ಮುನ್ನೆಚ್ಚರಿಕೆ ಕ್ರಮವಾಗಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.

ತುಂಬೆ ಡ್ಯಾಂ ನೀರನ್ನು ಕುಡಿಯಲು ಮಾತ್ರ ಬಳಸಲು ಪಾಲಿಕೆ ನಿರ್ಧರಿಸಿದೆ. ಇದಕ್ಕಾಗಿ ಕೈಗಾರಿಕೆಗಳಿಗೆ ಹೋಗುವ ನೀರನ್ನು ಕೂಡ ಕೆಲವು ದಿನಗಳ ಹಿಂದೆ ಕಡಿಮೆ ಮಾಡಲಾಗಿತ್ತು. ಎಂಆರ್‌ಪಿಎಲ್ ಮತ್ತು ಎಂಎಸ್‌ಇಝಡ್‌ ಸಂಸ್ಥೆಯು ಎಎಂಆರ್‌ ಕಿಂಡಿ ಅಣೆಕಟ್ಟಿನಿಂದ ನೀರನ್ನು ಬಳಕೆ ಮಾಡುತ್ತಿದ್ದು, ಇದರಲ್ಲಿ ಎಂಎಸ್‌ಇಝಡ್‌ ಸಂಸ್ಥೆಗೆ 27 ಎಂ.ಜಿ.ಡಿ. ಮತ್ತು ಎಂಆರ್‌ಪಿಎಲ್ ಸಂಸ್ಥೆಗೆ 6 ಎಂ.ಜಿ.ಡಿ. ನೀರನ್ನು ಮೇಲೆತ್ತಲು ಅನುಮತಿ ಇತ್ತು. ಈ ಎರಡೂ ಸಂಸ್ಥೆಯು ಬೇಸಗೆ ಪ್ರಾರಂಭವಾದ ಅವಧಿಯಲ್ಲಿ 18 ಎಂ.ಜಿ.ಡಿ. ನೀರನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆಯಷ್ಟೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆ ನಡೆಸಿ ನೀರು ಬಳಕೆ ಪ್ರಮಾಣವನ್ನು ತೀರ್ಮಾನಿಸಲಾಗಿತ್ತು. ಈಗ ಎಎಂಆರ್‌ ಅಣೆಕಟ್ಟಿನಲ್ಲಿ ಬಹುತೇಕ ನೀರು ಖಾಲಿಯಾಗಿರುವುದರಿಂದ ಈ ಎರಡೂ ಸಂಸ್ಥೆಗಳು ಸೇರಿ ದಿನಕ್ಕೆ 6.50 ಎಂ.ಜಿ.ಡಿ. ಮಾತ್ರ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ....

ಫೋಟೋ - http://v.duta.us/P6jrjwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/HlGqMQAA

📲 Get Dakshina Kannada News on Whatsapp 💬