[dakshina-kannada] - ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯೇ ಆಧಾರ

  |   Dakshina-Kannadanews

ಮೂಲ್ಕಿ: ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಇದ್ದರೂ ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದಾಗಿ ಈ ಭಾಗದಲ್ಲಿ ಅತಿಯಾದ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲ. ಆದರೆ ನೀರಿನ ಒರತೆ ಕಡಿಮೆ ಯಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕಿಲ್ಪಾಡಿ ಗ್ರಾಮ ಪಂಚಾಯತ್‌ ನಾಲ್ಕೈದು ವರ್ಷಗಳ ಹಿಂದೆ ಇಬ್ಟಾಗವಾಗಿ ಕಿಲ್ಪಾಡಿ ಮತ್ತು ಅತಿಕಾರಿಬೆಟ್ಟು ಗ್ರಾ. ಪಂ. ಆಗಿ ಪರಿವರ್ತನೆ ಯಾಯಿತು. ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿಲ್ಪಾಡಿ ಗ್ರಾಮ ಒಂದೇ ಇದ್ದು, ಅತಿಕಾರಿಬೆಟ್ಟು ಗ್ರಾ.ಪಂ. ವ್ಯಾಪ್ತಿಯಲ್ಲಿ ಶಿಮಂತೂರು ಮತ್ತು ಅತಿಕಾರಿ ಬೆಟ್ಟು ಗ್ರಾಮಗಳು ಸೇರಿ ಕೊಂಡಿವೆ. ಹೊಸದಾಗಿ ರೂಪಿಸಲಾದ ಈ ಎರಡೂ ಗ್ರಾ.ಪಂ. ಗಳಿಗೂ ಒಬ್ಬರೇ ಅಭಿವೃದ್ಧಿ ಅಧಿಕಾರಿ ಇದ್ದು, ವಾರದಲ್ಲಿ ಮೂರು ದಿನ ಎರಡು ಅವಧಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಟ್ಯಾಂಕ್‌ ನಿರ್ಮಾಣ

ಕಿಲ್ಪಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಎಸ್‌.ಸಿ. ಮತ್ತು ಎಸ್‌.ಟಿ. ಕಾಲನಿಯ ಬಳಿಯ ಸುಮಾರು ಐದು ಮನೆಗೆ ನೀರಿನ ಸಮಸ್ಯೆ ತೀವ್ರವಾಗಿದ್ದು, ಇದನ್ನು ಪರಿಹರಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಮೂಲಕ ಟ್ಯಾಂಕ್‌ ನಿರ್ಮಿಸಲಾಗಿದೆ. ಕೊಳವೆ ಬಾವಿ ಮೂಲಕ ಟ್ಯಾಂಕ್‌ಗೆ ನೀರು ಸಂಪರ್ಕಕೊಟ್ಟು ಸಮಸ್ಯೆ ಪರಿಹರಿಸಲು ಪಂಚಾಯತ್‌ ಮುಂದಾಗಿದೆ. ಈ ಎರಡು ಪಂಚಾಯತ್‌ನಲ್ಲಿ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಸದ್ಯಕ್ಕಿಲ್ಲ ಎನ್ನುತ್ತಾರೆ ಪಂಚಾಯತ್‌ ಪಿಡಿಒ....

ಫೋಟೋ - http://v.duta.us/AsjCPwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/et8nSAAA

📲 Get Dakshina Kannada News on Whatsapp 💬