[dakshina-kannada] - ಗೇರು ಕೃಷಿ : ರಬ್ಬರ್‌ಗೆ ಪರ್ಯಾಯದತ್ತ ಬೆಳೆಗಾರರ ಚಿತ್ತ

  |   Dakshina-Kannadanews

ಕರಾವಳಿ ಭಾಗದಲ್ಲಿ ಪ್ರಮುಖ ವಾಣಿಜ್ಯ ಉಪ ಬೆಳೆಯಾಗಿ ಲಗ್ಗೆಯಿಟ್ಟಿದ್ದ ಗೇರು ಬೆಳೆ ಆ ಬಳಿಕ ರಬ್ಬರ್‌ ಬೆಳೆಯ ಬೆಲೆಯ ಮುಂದೆ ಏಗಲಾಗದೆ ರೈತ ವರ್ಗದಿಂದ ದೂರ ಸರಿದಿತ್ತು. ಈಗ ಮತ್ತೆ ರಬ್ಬರ್‌ಗೆ ಪರ್ಯಾಯವಾಗಿ ಗೇರು ಬೆಳೆಯತ್ತ ಬೆಳೆಗಾರರ ಚಿತ್ತ ಹರಿಯುತ್ತಿದೆ.

ಅಡಿಕೆಗೆ ಹಳದಿ ರೋಗ, ರಬ್ಬರ್‌ ಬೆಲೆಗೆ ಚಿನ್ನದಂತಹ ಬೆಲೆ ಬಂದಾಗ ಕರಾವಳಿ ಭಾಗದಲ್ಲಿ ಸಾಂಪ್ರದಾಯಿಕವಾಗಿ ನಡೆಸಿಕೊಂಡು ಬರುತ್ತಿದ್ದ ಉಪ ಕೃಷಿ ಗೇರನ್ನು ಇಲ್ಲಿನ ಜನ ದೂರ ಮಾಡಿದ್ದರು. ಇದರಿಂದ ವರ್ಷದಿಂದ ವರ್ಷಕ್ಕೆ ಗೇರು ಬೆಳೆ ಕಡಿಮೆಯಾಗುತ್ತಿದೆ. ಆದರೆ ಗೋಡಂಬಿಯ ಬೇಡಿಕೆ ಜಾಸ್ತಿಯಾಗಿರುವುದರಿಂದ ಗೋಡಂಬಿ ರಫ್ತಿನಲ್ಲಿ ಮುಂಚೂಣಿಯಲ್ಲಿ ಭಾರತದಲ್ಲಿ ಮುಂದಿನ ದಿನಗಳಲ್ಲಿ ಗೇರು ಬೆಲೆಯೂ ಏರಿಕೆಯಾಗುವ ಸಾಧ್ಯತೆ ಕಂಡುಬಂದಿದೆ.

ಅಲ್ಪ ಪೋಷಣೆ ಸಾಕು

ಹೆಚ್ಚು ಮುತುವರ್ಜಿ ನಿರೀಕ್ಷಿಸದ, ಆದರೆ ಅಲ್ಪ ಪೋಷಣೆಯ ಮಾತ್ರಕ್ಕೆ ಉದಾರವಾಗಿ ಸ್ಪಂದಿಸುವ ಗೇರು ಕೃಷಿ ಕೂಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಕೃಷಿಕರಿಗೆ ಕಡಿಮೆ ಕೆಲಸದಲ್ಲಿ ಉಪ ಆದಾಯ ಪಡೆದುಕೊಳ್ಳಲು ಅನುಕೂಲವಾಗಿದೆ. ಗೇರು ಬೆಳೆಯನ್ನು ಉಷ್ಣ ಪ್ರದೇಶದಲ್ಲಿ ಸಮತಟ್ಟಾದ ಮತ್ತು ಇಳಿಜಾರು ಪ್ರದೇಶಗಳಲ್ಲೂ ಬೆಳೆಯಬಹುದು ಎಂಬುದು ಗೇರು ಕೃಷಿಯ ಬೆಳೆವಣಿಗೆಗೆ ಪೂರಕವಾಗಿದೆ....

ಫೋಟೋ - http://v.duta.us/z7qc1QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/i_jzxAAA

📲 Get Dakshina Kannada News on Whatsapp 💬