[dakshina-kannada] - ಚಿನ್ನದ ರಥ ಸಮರ್ಪಣೆಗೆ ಮತ್ತೆ ಜೀವ

  |   Dakshina-Kannadanews

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನೂತನ ಚಿನ್ನದ ರಥ ಅರ್ಪಿಸುವ ಕೆಲಸಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ದಿಢೀರನೇ ವೇಗ ಕಲ್ಪಿಸಿದ್ದು, ರಾಜಕೀಯವಾಗಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಅಡೆತಡೆಗಳಿಲ್ಲದೆ ಆಡಳಿತ ನಡೆಸಬೇಕಾದರೆ ಶೀಘ್ರ ಚಿನ್ನದ ರಥ ಅರ್ಪಿಸಬೇಕು ಎಂಬ ಜೋತಿಷಿಸಲಹೆ ಮೇರೆಗೆ ಸಿಎಂ ಮುಜರಾಯಿ ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಈ ಚಿನ್ನದ ರಥ ಪ್ರಸ್ತಾವ 2006ರದ್ದು. ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆದಾಗ ದೇವರಿಗೆ ಸ್ವರ್ಣ ರಥ ನಿರ್ಮಿಸಿ ಅರ್ಪಿಸುವ ಉದ್ದೇಶ ಹೊಂದಿದ್ದರಂತೆ. 12 ವರ್ಷಗಳಲ್ಲಿ ಅದು ಪೂರ್ಣಗೊಂಡಿಲ್ಲ. ಈಗ ಜೋತಿಷಿ ಸಲಹೆಯಂತೆ ಕೆಲಸ ಚುರುಕುಗೊಳ್ಳುವ ಲಕ್ಷಣಗಳಿವೆ. ಈ ಸಂಬಂಧ ಬೆಂಗಳೂರಿನಲ್ಲಿ ಚಿನ್ನದ ರಥ ನಿರ್ಮಾಣಕ್ಕೆ ಸಂಬಂಧಿಸಿ ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆದಿದೆ. ಜೋತಿಷಿಯ ಸಲಹೆ?: ಜೋತಿಷಿಯೊಬ್ಬರು ಚಿನ್ನದ ರಥ ನಿರ್ಮಾಣ ಪೂರ್ಣಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ಸಮಸ್ಯೆ ಉಂಟು. ಒಂದುವೇಳೆ ಚಿನ್ನದ ರಥ ಸಮರ್ಪಣೆಯಾದರೆ ಎಲ್ಲ ಅಡೆತಡೆಗಳೂ ನಿವಾರಣೆಯಾಗುತ್ತವೆ. ಸರ್ಕಾರಕ್ಕೂ ಧಕ್ಕೆ ಬಾರದು, ಮಂಡ್ಯದಲ್ಲಿ ಪುತ್ರ ನಿಖೀಲ್ ಗೆಲ್ಲಬಹುದು ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ....

ಫೋಟೋ - http://v.duta.us/FBp6vwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/R_GsnwAA

📲 Get Dakshina Kannada News on Whatsapp 💬