[dakshina-kannada] - ನೀರು ರೇಷನಿಂಗ್‌; ಎರಡು ದಿನಗಳೊಳಗೆ ಅಂತಿಮ ತೀರ್ಮಾನ: ಸಚಿವ ಖಾದರ್‌

  |   Dakshina-Kannadanews

ಮಹಾನಗರ: ನಗರದಲ್ಲಿ ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೂ ಮುಂದಿನ ಎರಡು ದಿನಗಳ ತುಂಬೆಯ ಒಳಹರಿವು ಗಮನಿಸಿಕೊಂಡು, ಮಳೆಯ ಸಾಧ್ಯತೆಯನ್ನು ಪರಾಮರ್ಶಿಸಿ ರೇಷನಿಂಗ್‌ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರಕ್ಕೆ ಕುಡಿಯುವ ನೀರು ಪೂರೈಕೆ ಯಲ್ಲಿ ಎದುರಾಗಿರುವ ಸಮಸ್ಯೆಗಳ ಹಿನ್ನೆಲೆಯಲ್ಲಿ, ರವಿವಾರ ತುಂಬೆ ವೆಂಟೆಡ್‌ ಡ್ಯಾಂಗೆ ಭೇಟಿ ನೀಡಿ ಅಧಿಕಾರಿಗಳ ಜತೆಗೆ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರ ಜತೆಗೆ ಮಾತನಾಡಿದರು.

ಜಿಲ್ಲಾಡಳಿತ, ಮನಪಾದ ಸದ್ಯದ ನಿಯಮ ಪ್ರಕಾರ ಪಾಲಿಕೆ ರೇಷನಿಂಗ್‌ ಮೇ 1ರಿಂದ ಆರಂಭವಾಗುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಇಬ್ಬರು ಶಾಸಕರ ಅಭಿಪ್ರಾಯ ಪಡೆದುಕೊಂಡು, ಮಾಜಿ ಶಾಸಕರು ಸಹಿತ ಜನಪ್ರತಿನಿಧಿಗಳಿಂದ ಮಾಹಿತಿ ಪಡೆದು, ಅಧಿಕಾರಿಗಳ ವಿವರಗಳೊಂದಿಗೆ ಜಿಲ್ಲಾಡಳಿತದ ಜತೆಗೆ ಚರ್ಚಿಸಿ ಮುಂದಿನ ಎರಡು ದಿನದೊಳಗೆ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಬಾವಿಗಳ ಸ್ವಚ್ಛತೆಗೆ ಕ್ರಮ

ಮುಂಜಾಗೃತ ಕ್ರಮವಾಗಿ ಮನಪಾ ವ್ಯಾಪ್ತಿಯ 48 ಸರಕಾರಿ ಬಾವಿ, ಸಾರ್ವ ಜನಿಕ ಬಾವಿಗಳನ್ನು ಸ್ವಚ್ಛಗೊಳಿಸಿ ಬಳಕೆಗೆ ಕ್ರಮ ವಹಿಸಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಎತ್ತರ ಪ್ರದೇಶಗಳಿಗೆ ನೀರಿನ ಪೂರೈಕೆಗೆ ಅಡಚಣೆಯಾದಲ್ಲಿ ಕುಡಿಯುವ ನೀರು ಒದಗಿಸಲು ಒಟ್ಟು 8 ಟ್ಯಾಂಕರ್‌ಗಳನ್ನು ಖಾಸಗಿಯವರಿಂದ ಬಾಡಿಗೆ ಆಧಾರದಲ್ಲಿ ಪಡೆಯಲು ಕ್ರಮ ವಹಿಸಲಾಗಿದೆ....

ಫೋಟೋ - http://v.duta.us/eAiRXwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/uqRn6wAA

📲 Get Dakshina Kannada News on Whatsapp 💬