[dakshina-kannada] - ಬಿಸಿಲ ಬೇಗೆಯಿಂದ ಸಾಯುತ್ತಿವೆ ಕೋಳಿಗಳು; ದುಬಾರಿಯಾದ ಕೋಳಿ ಮಾಂಸ

  |   Dakshina-Kannadanews

ಬೆಳ್ತಂಗಡಿ,: ಬಿಸಿಲಿನ ತಾಪಮಾನ ಏರಿಕೆಯ ಪರಿಣಾಮ ಕೋಳಿ ಸಾಕಣೆ ಉದ್ಯಮವೂ ಸಂಕಷ್ಟಕ್ಕೀಡಾಗಿದೆ. ಸಹಜಕ್ಕಿಂತ ಪ್ರತಿ ಸಾವಿರಕ್ಕೆ 20ರಿಂದ 30 ಕೋಳಿಗಳು ಹೆಚ್ಚುವರಿಯಾಗಿ ಸಾಯುತ್ತಿದ್ದು, ಇದರಿಂದ ಸಾಕಾಣಿಕೆದಾರರು ನಷ್ಟಕ್ಕೊಳಗಾಗುವುದರ ಜತೆಗೆ ಕೋಳಿ ಮಾಂಸವೂ ದುಬಾರಿಯಾಗಿದೆ.

ಬ್ರಾಯ್ಲರ್‌ ಕೋಳಿಗಳು ಸಾಮಾನ್ಯವಾಗಿ 4ರಿಂದ 6 ವಾರಗಳ ಕಾಲ ಬದುಕುತ್ತವೆ. ಬೇರೆ ಅವಧಿಗಳಲ್ಲಿ ಬ್ರಾಯ್ಲರ್‌ ಕೋಳಿಗಳ ಮರಣ ಪ್ರಮಾಣ ಶೇ.3-4 ಇದ್ದರೆ ಮಾರ್ಚ್‌ನಿಂದ ಮೇ ಅಂತ್ಯದವರೆಗೆ ಶೇ.5- 6ಕ್ಕೇರುತ್ತದೆ. ಇದರಿಂದ ಪ್ರಸ್ತುತ ಮಾಂಸದ ಕೋಳಿಯ ಧಾರಣೆ 130 ರೂ. (ಮಾಂಸ ಕೆಜಿಗೆ 190-200 ರೂ.)ಗಳಿಗೆ ತಲುಪಿದೆ.

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ತಾಪಮಾನ 36-37 ಡಿಗ್ರಿ ಸೆ. ಇದ್ದರೂ ವಾತಾವರಣದಲ್ಲಿ ಆದ್ರìತೆ ಇರುವುದರಿಂದ ಒತ್ತಡ ತಾಳಲಾರದೆ ಸಾಯುವುದು ಹೆಚ್ಚು ಎನ್ನುತ್ತಾರೆ ಕೋಳಿ ಸಾಕಣೆದಾರರು.

ಮೋಡ ಕವಿದ ವಾತಾವರಣ ಇದ್ದು, ಮಳೆ ಬರುತ್ತದೆ ಎಂಬ ಸ್ಥಿತಿ ಇದ್ದಾಗಲೂ ಕೋಳಿ ಮರಣ ಪ್ರಮಾಣ ಹೆಚ್ಚು. ಸಾಯುವ ಪ್ರಮಾಣ ಅಪರಾಹ್ನ 2ರಿಂದ ಸಂಜೆ 5ರ ಅವಧಿಯಲ್ಲಿ ಹೆಚ್ಚು. ಇತರ ಜಿಲ್ಲೆಗಳಲ್ಲಿ 40 ಡಿಗ್ರಿ ಸೆ. ತಾಪಮಾನ ಇದ್ದಾಗಲೂ ನೀರು ಸಿಂಪಡಿಸಿದರೆ ಬದುಕುತ್ತವೆ. ಆದರೆ ಕರಾವಳಿಯಲ್ಲಿ ಸಾಧ್ಯತೆ ಕಡಿಮೆ ಎನ್ನುವುದು ವೈದ್ಯರ ಮಾತು....

ಫೋಟೋ - http://v.duta.us/5nPOfAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/uFUEBQAA

📲 Get Dakshina Kannada News on Whatsapp 💬