[dakshina-kannada] - ವರ್ಷ ಕಳೆದರೂ ದುರಸ್ತಿಯಾಗದ ಜಳಕದ ಕೆರೆ ರಸ್ತೆ

  |   Dakshina-Kannadanews

ತೋಕೂರು: ಇಲ್ಲಿನ ಪಡುಪಣಂಬೂರು ಗ್ರಾ.ಪಂ. ನ ಬೆಳ್ಳಾಯರು ಗ್ರಾಮದಲ್ಲಿ ನಡೆಸಿರುವ ಐಎಸ್‌ಪಿಎಲ್ನ (ಪಾದೂರು) ಪೈಪ್‌ಲೈನ್‌ ಕಾಮಗಾರಿಗಾಗಿ ಸುಸಜ್ಜಿತ ಕಾಂಕ್ರೀಟ್ ರಸ್ತೆಯೊಂದನ್ನು ಕಡಿದು ವರ್ಷ ಕಳೆದರೂ ಸೂಕ್ತವಾಗಿ ದುರಸ್ತಿ ನಡೆಸದೇ ನಿರ್ಲಕ್ಷಿಸಿರುವುದರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ದೇವರು ಷಷ್ಠಿಯ ಸಂದರ್ಭದಲ್ಲಿ ಜಳಕದ ಧಾರ್ಮಿಕ ವಿಧಿ ವಿಧಾನಕ್ಕೆ ದೇವರ ಮೂರ್ತಿಯ ಸವಾರಿ ಇದೇ ರಸ್ತೆಯಾಗಿ ತೆರಳುತ್ತಿರುವುದರಿಂದ ಜಳಕದ ರಸ್ತೆ ಎಂದೇ ಪ್ರಸಿದ್ಧಿಯಾಗಿದೆ.

ಬೆಳ್ಳಾಯರು ಗ್ರಾಮಸ್ಥರು ತೋಕೂರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಇದನ್ನು ಕಳೆದ ಎರಡು ವರ್ಷದ ಹಿಂದೆ ಜಿ.ಪಂ.ನ ಮೂಲಕ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿಯ ಯೋಜನೆಯಲ್ಲಿ 50 ಲಕ್ಷ ರೂ. ವೆಚ್ಚದ ಅನುದಾನದಲ್ಲಿ ಸಂಪೂರ್ಣವಾಗಿ ಕಾಂಕ್ರೀಟ್ ಕಾಮಗಾರಿ ನಡೆಸಿ ಅಭಿವೃದ್ಧಿಪಡಿಸಲಾಗಿತ್ತು.

ರಸ್ತೆಯಲ್ಲಿ ಬಿರುಕು

ಈ ರಸ್ತೆಯ ನಿರ್ಮಾಣದ ಅನಂತರ ಐಎಸ್‌ಪಿಎಲ್ ಯೋಜನೆಗಾಗಿ ಪಾದೂರು ಪೈಪ್‌ಲೈನ್‌ ಹಾದುಹೋಗಲು ರಸ್ತೆಯನ್ನೇ ಅಗೆದು ಅನಂತರ ಕಾಟಾಚಾರಕ್ಕೆ ಕಾಂಕ್ರೀಟ್ ಮಿಶ್ರಿತ ರಸ್ತೆಯನ್ನು ದುರಸ್ತಿಗೊಳಿಸಿದ್ದರು. ಅದು ಅಲ್ಲಲ್ಲಿ ಬಿರುಕು ಬಿಟ್ಟಿದೆ. ರಸ್ತೆಯು ಪರಿಪೂರ್ಣವಾಗಿ ನಿರ್ಮಾಣವಾಗದಿರುವುದರಿಂದ ರಸ್ತೆಗೆ ಕಲ್ಲುಗಳಿಂದ ಬಂದ್‌ ಮಾಡಿ ಪಕ್ಕದಲ್ಲಿ ಮಣ್ಣಿನ ರಸ್ತೆಯನ್ನು ಸುತ್ತಿ ಬಳಸಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ. ಈ ರೀತಿಯಾಗಿ ನಿರ್ಮಿಸಿ ವರ್ಷ ಕಳೆದರೂ ಸಹ ಈಗಲೂ ಮಣ್ಣಿನ ರಸ್ತೆಯಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ನಿತ್ಯ ಸಂಚಾರಿಗಳಿಗೆ ಇದೆ....

ಫೋಟೋ - http://v.duta.us/RWi47wAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/tC8Z-wAA

📲 Get Dakshina Kannada News on Whatsapp 💬