[dakshina-kannada] - ಸಂಪರ್ಕ, ಸಂವಹನದ ಕಲಾ ಭಾಷೆ ‘ನೃತ್ಯ’

  |   Dakshina-Kannadanews

ಕಲೆಯೆನ್ನುವುದು ಎಲ್ಲರಿಗೂ ಒಲಿಯುವಂತದ್ದಲ್ಲ. ಅಂತೆಯೇ ಒಲಿದು ಬರುವ ಕಲೆಯನ್ನು ಉಳಿಸಿಕೊಳ್ಳುವುದು ಕೂಡ ಒಂದು ಸಾಹಸ. ಅದಕ್ಕೆ ಶ್ರದ್ಧೆ, ಭಕ್ತಿ ಮತ್ತು ಪ್ರೀತಿ ಅಗತ್ಯವಾಗಿರುತ್ತದೆ. ಅಂತಹ ಕಲಾ ನೃತ್ಯ ಪ್ರಕಾರಗಳಲ್ಲಿ ನೃತ್ಯ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜುಗಳಲ್ಲಿ ನೃತ್ಯಕ್ಕಾಗಿಯೇ ತರಗತಿಗಳನ್ನು ಆರಂಭಿಸುತ್ತಿದ್ದು, ಇದು ನೃತ್ಯ ಕಲೆಗೆ ವಿಶೇಷ ಮನ್ನಣೆ ನೀಡುವಲ್ಲಿ ಮುನ್ನುಡಿಯಾಗುತ್ತಿದೆ.

ಇತಿಹಾಸ:

1982ರಲ್ಲಿ ಇಂಟರ್‌ನ್ಯಾಶನಲ್ ಥಿಯೇಟರ್‌ ಇನ್‌ಸ್ಟಿಟ್ಯೂಟ್ (ಐಟಿಐ) ನ ಡ್ಯಾನ್ಸ್‌ ಕಮಿಟಿ ಅಂತಾರಾಷ್ಟ್ರೀಯ ಡ್ಯಾನ್ಸ್‌ ಡೇ (ನೃತ್ಯ ದಿನ) ಅನ್ನು ಪ್ರತಿವರ್ಷ ಎಪ್ರಿಲ್ 29ರಂದು ಆಧುನಿಕ ಬ್ಯಾಲೆ ಸೃಷ್ಟಿಕರ್ತ ಜೀನ್‌ಜಾರ್ಜಸ್‌ ನೊವೆರ್ರಿಯಾ ಜನ್ಮದಿನದ ಅಂಗವಾಗಿ ಆಚರಿಸಲು ಆರಂಭಿಸಿತು. ಐಟಿಐ ಡ್ಯಾನ್ಸ್‌ ಕಮಿಟಿ ಮತ್ತು ಯುನೆಸ್ಕೋ ಈ ದಿನವನ್ನು ಜಾಗತಿಕವಾಗಿ ಆಚರಿಸುತ್ತಿದೆ.

ಉದ್ದೇಶ:

ಪ್ರಪಂಚದ್ಯಾಂತ ಎಲ್ಲರೂ ನೃತ್ಯ, ಉತ್ಸವದಲ್ಲಿ ಪಾಲ್ಗೊಳ್ಳಬೇಕು, ರಾಜಕೀಯ, ಸಾಂಸ್ಕೃತಿಕ ಹಾಗೂ ಜನಾಂಗೀಯ ಅಡೆತಡೆಗಳನ್ನು ದಾಟಿ ಸಾಮಾನ್ಯ ಭಾಷೆಯೊಂದಿಗೆ ಜನರನ್ನು ಒಟ್ಟು ಸೇರಿಸಬೇಕು, ನೃತ್ಯಕ್ಕೆ ಸಾರ್ವತ್ರಿಕ ಮನ್ನಣೆ ನೀಡಬೇಕು ಎಂಬುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ. ಪ್ರತಿವರ್ಷ ವಿಶ್ವ ಡ್ಯಾನ್ಸ್‌ ಅಲೈಯನ್ಸ್‌ ಜತೆಗೆ ಐಟಿಐ ಮತ್ತು ಡ್ಯಾನ್ಸ್‌ ಕಮಿಟಿ ಪ್ಯಾರಿಸ್‌ನ ಯುನೆಸ್ಕೋದಲ್ಲಿ ಅಂತಾರಾಷ್ಟ್ರೀಯ ನೃತ್ಯದಿನವನ್ನು ನೃತ್ಯ ನಿರ್ದೇಶಕ ಅಥವಾ ನರ್ತಕನ ಸಂದೇಶದೊಂದಿಗೆ ಆಚರಿಸುತ್ತದೆ....

ಫೋಟೋ - http://v.duta.us/6l68XgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/-UnOJwAA

📲 Get Dakshina Kannada News on Whatsapp 💬