[dakshina-kannada] - ಸಂಭಾವ್ಯ ಅಪಾಯ ತಪ್ಪಿಸಿದ ಅತ್ತೆ-ಅಳಿಯನ ಸಮಯಪ್ರಜ್ಞೆ

  |   Dakshina-Kannadanews

ಪುತ್ತೂರು: ರೈಲು ಪ್ರಯಾಣ ಮಾಡುತ್ತಿದ್ದ ಅತ್ತೆ- ಅಳಿಯನ ಸಮಯ ಪ್ರಜ್ಞೆಯ ಜತೆಗೆ ಕುಂದಾಪುರ ಬಿಜೂರು ಬಳಿಯ ರೈಲು ಹಳಿ ಹತ್ತಿರದಲ್ಲಿದ್ದ ಮನೆಯವರ ಸಹಕಾರದಿಂದ ಭಾರೀ ರೈಲು ಅವಘಡವೊಂದು ತಪ್ಪಿದಂತಾಗಿದೆ.

ಮುಂಬಯಿಯಿಂದ ಎರ್ನಾಕುಲಂಗೆ ಹೊರಟಿದ್ದ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ನ ಹವಾನಿಯಂತ್ರಿತ ಬೋಗಿಯಲ್ಲಿ ಬೆಂಕಿ ಕಂಡು ಕೂಡಲೇ ಎಲ್ಲರನ್ನೂ ಎಚ್ಚರಿಸಿ ಸಂಭವನೀಯ ಅವಘಡವನ್ನು ತಪ್ಪಸುವಲ್ಲಿ ಯಶಸ್ವಿಯಾದವರು ಪುತ್ತೂರು ತಾಲೂಕಿನ ತಿಂಗಳಾಡಿಯ ಜಲಜಾಕ್ಷಿ ಮನೋಹರ್‌ ರೈ ಮತ್ತು ಅವರ ಅಳಿಯ ನಿಶ್ಚಲ್‌ ಶೆಟ್ಟಿ ಅವರು. ಮೊಮ್ಮಗುವನ್ನು ನೋಡಿಕೊಳ್ಳಲೆಂದು ಫೆ. 27ರಂದು ಮುಂಬಯಿ ಇರೋಲ್‌ನಲ್ಲಿರುವ ಮಗಳ ಮನೆಗೆ ಜಲಜಾಕ್ಷಿ ತೆರಳಿದ್ದರು.

ಬಳಿಕ ಎ. 27ರಂದು ರಾತ್ರಿ ತಮ್ಮ ಮಗಳು ಅಕ್ಷತಾ, ಅಳಿಯ ನಿಶ್ಚಲ್‌ ಶೆಟ್ಟಿ ಹಾಗೂ 8 ತಿಂಗಳ ಮಗುವಿನೊಂದಿಗೆ ಪನ್ವೇಲ್‌ ನಿಲ್ದಾಣದಲ್ಲಿ ರೈಲು ಹತ್ತಿದ್ದರು. ಎಸಿ ಬೋಗಿಯ ಬಿ4ರಲ್ಲಿ ಅವರ ಆಸನಗಳನ್ನು ಕಾದಿರಿಸಲಾಗಿತ್ತು.

“ಶೌಚಾಲಯದ ಪಕ್ಕದಲ್ಲಿ ಮೇಲ್ಭಾಗದ ಸೀಟಿನಲ್ಲಿ ಮಲಗಿದ್ದ ನನಗೆ ನಿದ್ದೆ ಬಂದಿರಲಿಲ್ಲ. ತಡರಾತ್ರಿ ಶೌಚಾಲಯ ಭಾಗದಿಂದ ಹೊಗೆ ಕಾಣಿಸಿಕೊಂಡಿತು. ತತ್‌ಕ್ಷಣ ಕುಳಿತೆ. ಸುಟ್ಟ ವಾಸನೆಯೂ ಬರತೊಡಗಿತು. ಹತ್ತಿರ ಹೋಗಿ ನೋಡಿದೆ. ಗಾಬರಿಯಾಯಿತು, ಏನು ಮಾಡಬೇಕೆಂದು ಗೊತ್ತಾಗಲಿಲ್ಲ. ಬಹಳ ಬಾರಿ ರೈಲಿನಲ್ಲಿ ಪ್ರಯಾಣಿಸಿದವಳಲ್ಲ ನಾನು. ಆದರೂ ಜೋರಾಗಿ ಬೊಬ್ಬೆ ಹಾಕುತ್ತ ಬಂದು ಮಗಳನ್ನು ಎಬ್ಬಿಸಿದೆ. ಅವಳೂ ಆತಂಕಗೊಂಡಳು. ಅಷ್ಟರಲ್ಲಿ ಬೋಗಿಯಲ್ಲಿದ್ದವರೆಲ್ಲ ಎಚ್ಚರಗೊಂಡರು. ಅಳಿಯ ಚೈನ್‌ ಎಳೆದು ರೈಲು ನಿಲ್ಲಿಸಿದರು. ರೈಲು ನಿಂತ ಕೂಡಲೇ ಕೆಳಗೆ ಹಾರಿಬಿಟ್ಟೆವು ಎನ್ನುತ್ತಾರೆ ಜಲಜಾಕ್ಷಿ....

ಫೋಟೋ - http://v.duta.us/YfAtkwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/eJOpGQAA

📲 Get Dakshina Kannada News on Whatsapp 💬