[davanagere] - ತುಂಗಭದ್ರೆ ಒಡಲಲ್ಲೂ ನೀರಿಗೆ ಹಾಹಾಕಾರ

  |   Davanagerenews

ಹರಪನಹಳ್ಳಿ: ದಿನದಿಂದ ದಿನಕ್ಕೆ‌ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ತಾಲೂಕಿನಲ್ಲಿ ಕುಡಿಯುವ ನೀರಿಗೆ ತೀವ್ರ ತೊಂದರೆ ಉಂಟಾಗಿದೆ. ಕೆರೆಗಳಲ್ಲಿ ನೀರಿಲ್ಲದಂತಾಗಿದ್ದು, ಕೊಳವೆ ಬಾವಿಗಳಿಂದಲೂ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ತಾಲೂಕಿನಲ್ಲಿ ತುಂಗಭದ್ರಾ ನದಿ ಹರಿದು ಹೋಗುತ್ತಿದ್ದು, ಈಗಲೇ ನೀರಿನ ಹರಿವು ಕಡಿಮೆಯಾಗಿದೆ. ಕೆರೆ, ಹಳ್ಳಗಳು ಬತ್ತಿವೆ. ಅಂತರ್ಜಲ ಮಟ್ಟವೂ ದಿನೇ ದಿನೇ ಕುಸಿಯುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ತಾಲೂಕನ್ನು ಸತತವಾಗಿ ಬರ ಕಾಡುತ್ತಿರುವ ಪರಿಣಾಮ ಗ್ರಾಮಗಳಲ್ಲಿ 500ಕ್ಕಿಂತಲೂ ಹೆಚ್ಚು ಅಡಿಗಳವರೆಗೆ ಕೊಳವೆ ಬಾವಿ ಕೊರೆದರೂ ಹನಿ ನೀರು ಬರದಂತಾಗಿದೆ.

ತಾಲೂಕಿನ ಒಟ್ಟು 8 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಪ್ರತಿ ದಿನ 60 ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಇದಲ್ಲದೇ ಬೋರವೆಲ್ ಕೊರೆದರೂ ನೀರು ಲಭ್ಯವಾಗದಂತಹ ಒಟ್ಟು 25 ಗ್ರಾಮಗಳಲ್ಲಿ 34 ಖಾಸಗಿ ಮಾಲೀಕರಿಂದ ನೀರು ಪಡೆದು ಜನರಿಗೆ ನೀಡಲಾಗಿದೆ.

ಸಮಸ್ಯೆಯಿರುವ ಗ್ರಾಮಗಳು: ಅಣಜಿಗೆರೆ, ಹುಣಸಿಕಟ್ಟಿ, ಆಲದಹಳ್ಳಿ, ವಡೇರಹಳ್ಳಿ, ಅರಸೀಕೆರೆ, ತಾಳೇದಹಳ್ಳಿ, ಪಾವನಪುರ, ಹಲೇ ಓಬಳಾಪುರ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಆಗುತ್ತಿದೆ. ಹನುಮನಹಳ್ಳಿ, ಮಾದಿಹಳ್ಳಿ, ಎನ್‌.ಶೀರನಹಳ್ಳಿ, ಯಲ್ಲಾಪುರ, ಉದ್ದಗಟ್ಟಿ, ನೀಲಗುಂದ, ಚನ್ನಹಳ್ಳಿ, ಹಾರಕನಾಳು, ಹುಲಿಕಟ್ಟಿ, ಕಂಡಿಕೇರಿ, ಅರಸೀಕೆರೆ, ಲೋಲೇಶ್ವರ, ಚೆನ್ನಾಪುರ ತಾಂಡಾ, ನಂದಿಬೇವೂರು, ಕೊಂಗನಹೊಸೂರು, ನಂದಿಬೇವೂರು ತಾಂಡಾ, ಜಂಗಮ ತುಂಬಿಗೇರಿ, ಚಿಗಟೇರಿ, ನಿಲುವಂಜಿ, ಹೊಂಬಳಗಟ್ಟಿ, ಬಾಗಳಿ, ಕಡಬಗೆರೆ, ಕ್ಯಾರಕಟ್ಟೆ ಗ್ರಾಮಗಳಲ್ಲಿ ಒಂದೊಂದು ಗ್ರಾಮಗಳಲ್ಲಿ ಇಬ್ಬರು ಮೂರು ಜನ ಖಾಸಗಿ ಮಾಲೀಕರರಿಂದ ಹಣ ಕೊಟ್ಟು ನೀರು ಪಡೆಯಲಾಗುತ್ತಿದೆ....

ಫೋಟೋ - http://v.duta.us/O1V3VgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/97SxOAAA

📲 Get Davanagere News on Whatsapp 💬