[davanagere] - ಹೊನ್ನಾಳಿ ಹೊಡ್ತ ಈ ಬಾರಿ ಯಾರಿಗೆ?

  |   Davanagerenews

ದಾವಣಗೆರೆ: ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೊನ್ನಾಳಿ ಹೊಡ್ತ…. ಎಂದೇ ಮತದಾರರ ಗುಟ್ಟಿನ ನಡೆ ಬಗ್ಗೆ ವಿಶೇಷವಾಗಿ ಬಣ್ಣಿಸುವ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದಲ್ಲಿ 2014ರ ಚುನಾವಣೆಗಿಂತ ಈ ಬಾರಿ ಮತದಾನ ಏರಿಕೆ ಆಗಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಶೇ. 78.82 ಮತದಾನ ಆಗಿದ್ದರೆ, ಈ ಬಾರಿ ಚುನಾವಣೆಯಲ್ಲಿ ಶೇ. 80.01 ಮತದಾನ ಆಗಿದೆ.

ಹಿಂದಿನ ಚುನಾವಣೆಯಲ್ಲಿ ಒಟ್ಟು 1,79,714 ಮತದಾರರ ಪೈಕಿ 1,41,662 ಮಂದಿ ಮತದಾನ ಮಾಡಿದ್ದರು.

ಈ ಬಾರಿಯ ಚುನಾವಣೆಯಲ್ಲಿ 96,097 ಪುರುಷರು, 95,327 ಮಹಿಳೆಯರು ಹಾಗೂ ನಾಲ್ವರು ಇತರರು ಒಳಗೊಂಡಂತೆ 1,91.428 ಮತದಾರರು ಇದ್ದರು. ಕಳೆದ ಚುನಾವಣೆಗಿಂತ ಈ ಬಾರಿ 11,714 ಮತದಾರರು ಹೆಚ್ಚಾಗಿದ್ದಾರೆ. ಕಳೆದ ಏ.23ರಂದು ನಡೆದ ಚುನಾವಣೆಯಲ್ಲಿ 78,901 ಪುರುಷರು 74,263 ಮಹಿಳೆಯರು ಮತದಾನ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 1,53,164 ಮಂದಿ ತಮ್ಮ ಸಂವಿಧಾನಿಕ ಹಕ್ಕು ಚಲಾಯಿಸಿದ್ದಾರೆ. ಇತರೆ ಮತದಾರರಲ್ಲಿ ಒಬ್ಬರೂ ಮತದಾನಕ್ಕೆ ಮುಂದಾಗಿಲ್ಲ.

ಕಳೆದ ಲೋಕಸಭಾ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ದಾಖಲಾಗಿರುವ ಮತಗಳ ಅಂತರ 11,502. ಇನ್ನು ಶೇಕಡಾವಾರು ವ್ಯತ್ಯಾಸ 1.19%. ಈ ಕ್ಷೇತ್ರದಲ್ಲೂ ಈ ಬಾರಿ ಇದೇ ಪಕ್ಷ ಲೀಡ್‌ ಪಡೆಯಲಿದೆ ಎಂದು ಹೇಳುವುದು ಕಷ್ಟ ಸಾಧ್ಯ. ಏಕೆಂದರೆ ಮೈತ್ರಿ ಅಭ್ಯರ್ಥಿಯಾಗಿರುವ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೊನ್ನಾಳಿ ಪಟ್ಟಣದವರು. ಹಾಗಾಗಿ ತಮ್ಮ ಕ್ಷೇತ್ರದವರೇ ಅಭ್ಯರ್ಥಿ ಆಗಿರುವುದರಿಂದ ಹೊನ್ನಾಳಿ ಮತದಾರರು ಅವರ ಬಗ್ಗೆ ಒಲವು ತೋರುವ ಸಾಧ್ಯತೆ ಇದೆ. ಎಚ್.ಬಿ.ಮಂಜಪ್ಪ ಈ ಹಿಂದೆ ತಾಪಂ, ಪಟ್ಟಣ ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಆಡಳಿತ ನಡೆಸಿದವರು....

ಫೋಟೋ - http://v.duta.us/BjVe5gAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/TJGGxgAA

📲 Get Davanagere News on Whatsapp 💬