[dharwad] - ಕಮಲ ಹಿಡಿದಳೇ ಸರಸ್ವತಿ, ಕೈಗೆ ಬಂತೇ ಲಕ್ಷ್ಮೀ?

  |   Dharwadnews

ಹು-ಧಾ ಪಶ್ಚಿಮ ಕ್ಷೇತ್ರ ಇಡೀ ಜಿಲ್ಲೆಯಲ್ಲಿ ಅತೀ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರ. ಇಲ್ಲಿ 3,38,976 ಜನ ಮತದಾರರಿದ್ದು, ಈ ಬಾರಿ ಇಲ್ಲಿ ಒಟ್ಟು ಶೇ.63.86 ಮತದಾನವಾಗಿ 1,55,310 ಜನ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ಲೆಕ್ಕ ನೋಡಿದರೆ ಈ ಕ್ಷೇತ್ರ ಬಿಜೆಪಿಗೆ ಅತೀ ಹೆಚ್ಚು ಅನುಕೂಲವಾಗಿರುವ ಕ್ಷೇತ್ರ. 2018ರ ವಿಧಾನಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಇತ್ತು. ಆದರೆ ಕೊನೆ ಕ್ಷಣದಲ್ಲಿ ಕಣದಿಂದಲೇ ಹಿಂದೆ ಸರಿದ ಜೆಡಿಎಸ್‌ ಅಭ್ಯರ್ಥಿ ಅಲ್ತಾಫ್‌ ಕಿತ್ತೂರ ಕೈ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರಗೆ ಬೆಂಬಲ ಸೂಚಿಸಿದರು.

ಭವಿಷ್ಯಃ ಅದೇ ಕಾಂಗ್ರೆಸ್‌ ಸೋಲಿಗೆ ಇಲ್ಲಿ ಪ್ರಬಲ ಕಾರಣವಾಗಿ ಮುಸ್ಲಿಂ ಮತಗಳು ಕ್ರೂಢೀಕರಣವಾಗುತ್ತಿದ್ದಂತೆಯೇ ಬಿಜೆಪಿ ಹಣೆಗೆ ಕೇಸರಿ ಬಣ್ಣದ ತಿಲಕ ಇಡುವ ಅಭಿಯಾನ ಆರಂಭಿಸಿ ಕ್ಷೇತ್ರದಲ್ಲಿನ ಹಿಂದೂ ಮತ್ತು ಲಿಂಗಾಯತ ಮತಗಳನ್ನು ಬುಟ್ಟಿಗೆ ಹಾಕಿಕೊಂಡು ಗೆದ್ದಿತು.

ನಗರ ಮಧ್ಯದ ಹಳ್ಳಿಗರು ಯಾರತ್ತ?: ಈ ಕ್ಷೇತ್ರ ನಗರ ಕ್ಷೇತ್ರವಾದರೂ ಇಲ್ಲಿ ಇನ್ನೂ ಕೃಷಿ ಸಮುದಾಯದ ದೊಡ್ಡ ದೊಡ್ಡ ಹಳ್ಳಿಗಳಿವೆ. ಗಾಮನಗಟ್ಟಿ, ಅಮರಗೋಳ, ಸುತಗಟ್ಟಿ, ಉಣಕಲ್, ಗೋಕುಲ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈ ಬಾರಿ ಚುನಾವಣೆಯಲ್ಲಿ ಜೆಡಿಎಸ್‌-ಕಾಂಗ್ರೆಸ್‌ಗೆ ಹೆಚ್ಚು ಒಲವು ವ್ಯಕ್ತವಾಗಿದ್ದು ಸತ್ಯ....

ಫೋಟೋ - http://v.duta.us/Kw231AAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/tHqzxAAA

📲 Get Dharwad News on Whatsapp 💬