[dharwad] - ಧಾರವಾಡ ಹಾಲು ಒಕ್ಕೂಟಕ್ಕೆ 12 ನಿರ್ದೇಶಕರ ಆಯ್ಕೆ

  |   Dharwadnews

ಧಾರವಾಡ: ಧಾರವಾಡ ಹಾಲು ಒಕ್ಕೂಟದ 12 ನಿರ್ದೇಶಕ ಸ್ಥಾನಗಳಿಗೆ ರವಿವಾರ ಚುನಾವಣೆ ನಡೆದಿದ್ದು, 6 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ತಲಾ 3 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ರವಿವಾರ ಚುನಾವಣೆ ಕೈಗೊಂಡು ನಿರ್ದೇಶಕರ ಆಯ್ಕೆ ಮಾಡಲಾಗಿದೆ. ಒಟ್ಟು 12 ಸ್ಥಾನಗಳ ಪೈಕಿ ಆರು ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಧಾರವಾಡ ಜಿಲ್ಲೆಯಿಂದ ಶಂಕರಪ್ಪ ಮುಗದ, ಗದಗ ಜಿಲ್ಲೆಯಿಂದ ಗೋವಿಂದಗೌಡ ಹಿರೇಗೌಡರ, ನೀಲಕಂಠಪ್ಪ ಶಿವಪ್ಪ ಅಸೂಟಿ, ಉತ್ತರ ಕನ್ನಡ ಜಿಲ್ಲೆಯಿಂದ ಸುರೇಶ್ಚಂದ್ರ ಹೆಗಡೆ, ಹಾವೇರಿ ಜಿಲ್ಲೆಯಿಂದ ಬಸವರಾಜ ನೀಲಪ್ಪ ಅರಬಗೊಂಡ, ಬಸನಗೌಡ ಶಿವನಗೌಡ ಮೇಲಿಮನಿ ಅವಿರೋಧ ಆಯ್ಕೆಯಾದರು.

ಚುನಾವಣೆ ಗೆದ್ದವರು:ಇನ್ನುಳಿದ 6 ಸ್ಥಾನಗಳಿಗೆ ಬೆಳಗ್ಗೆಯಿಂದ ಮತದಾನ ನಡೆಯಿತು. ಧಾರವಾಡ ಜಿಲ್ಲೆಯಿಂದ ಗೀತಾ ಸುರೇಶ ಮರಲಿಂಗಣ್ಣವರ, ಸುರೇಶ ಸೋಮಪ್ಪ ಬಣವಿ, ಹಾವೇರಿ ಜಿಲ್ಲೆಯಿಂದ ಹನುಮಂತಗೌಡ ಬಸನಗೌಡ ಭರಮಣ್ಣನವರ, ಗದಗ ಜಿಲ್ಲೆಯಿಂದ ಮಂಜುನಾಥಗೌಡ್ರ ಹನುಮಂತ್ರಗೌಡ್ರ ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಪರಶುರಾಮ ವೀರಭದ್ರ ನಾಯ್ಕ ಹಾಗೂ ಶಂಕರ ಪರಮೇಶ್ವರ ಹೆಗಡೆ ಜಯ ಗಳಿಸಿ ನೂತನ ನಿರ್ದೇಶಕರಾಗಿ ಆಯ್ಕೆಯಾದರು....

ಫೋಟೋ - http://v.duta.us/Oy5iLgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/RZVNkgAA

📲 Get Dharwad News on Whatsapp 💬