[dharwad] - ಸಂಪ್ರದಾಯ-ಆಚರಣೆ ಅರಿತಾಗ ಜೀವನ ಸಾರ್ಥಕ: ವಿಶ್ವಪ್ರಸನ್ನ ಶ್ರೀ

  |   Dharwadnews

ಹುಬ್ಬಳ್ಳಿ: ನಮ್ಮ ಸಂಪ್ರದಾಯ ಹಾಗೂ ಆಚರಣೆ ಹಿನ್ನೆಲೆ ಅರಿತಾಗ ಜೀವನದಲ್ಲಿ ಸಾರ್ಥಕತೆ ಬರುತ್ತದೆ ಎಂದು ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಹೇಳಿದರು.

ನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ರವಿವಾರ ಆಯೋಜಿಸಿದ ‘ಮಧ್ವ ಸಿದ್ಧಾಂತ ಒಂದು ಜಿಜ್ಞಾಸೆ’ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಆಚರಣೆ ಕುರಿತು ನಮ್ಮಲ್ಲಿ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ. ಸಂಪ್ರದಾಯ ಯಾಕೆ ಪಾಲನೆ ಮಾಡಬೇಕೆಂಬ ಪ್ರಶ್ನೆಗಳು ಮೂಡುತ್ತವೆ. ಆದರೆ ಮಧ್ವ ಸಿದ್ಧಾಂತದಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರವಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಮಧ್ವಾಚಾರ್ಯರದು ದ್ವೈತ ಸಿದ್ಧಾಂತ. ಅಚರಣೆ ತತ್ವದ ಅನುಭಾವವೇ ಹೊರತು ಅದೇ ತತ್ವವಲ್ಲ. ತತ್ವ ಅಥವಾ ತರ್ಕಭಾಗದ ಅರಿವಿಲ್ಲದೇ ಮಾಡುವ ಆಚರಣೆ ಕಾಲ ಕ್ರಮೇಣ ಅತಾರ್ಕಿಕ ಎನಿಸಲಾರಂಭಿಸುತ್ತದೆ. ಇದೇ ರೀತಿ ಮುಂದುವರಿದರೆ ತತ್ವ ಹಾಗೂ ಆಚರಣೆ ಎರಡೂ ಲುಪ್ತವಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಗಂಗಾಸ್ನಾನದ ಮಹತ್ವವನ್ನು ಅರಿಯದೇ ಗಂಗೆಯಲ್ಲಿ ಮುಳುಗು ಹಾಕಿದರೆ ಯಾವುದೇ ಫಲವಿಲ್ಲ. ಗಂಗೆಯಲ್ಲಿ ಸಹಸ್ರಾರು ಜಲಚರಗಳು ಹುಟ್ಟಿ ಅಲ್ಲಿಯೇ ಬದುಕಿ ಸಾಯುತ್ತವೆ. ಅವುಗಳಿಗೆ ಗಂಗೆಯ ಮಹತ್ವ ಏನೆಂಬುದು ಗೊತ್ತಿರುವುದಿಲ್ಲ. ಭಗವಂತ ಇಲ್ಲಿ ನೀರಾಗಿ ಹರಿದಿದ್ದಾನೆ ಎಂಬ ನಂಬಿಕೆ ನಮಗಿರಬೇಕು. ನಾವು ಆಚರಣೆಯ ಪ್ರಯೋಜನ ಅರಿಯುವುದು ಮುಖ್ಯ ಎಂದರು....

ಫೋಟೋ - http://v.duta.us/6Yg_EgAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/C-7dFgAA

📲 Get Dharwad News on Whatsapp 💬