[hassan] - ವಿದ್ಯಾರ್ಥಿಗಳಿಗೆ ಸಂಸ್ಕಾರ, ಸಂಸ್ಕೃತಿ ಪರಿಚಯಿಸಿ

  |   Hassannews

ಚನ್ನರಾಯಪಟ್ಟಣ/ಶ್ರವಣಬೆಳಗೊಳ: ಸರ್ಕಾರಿ ಹಾಗೂ ಖಾಸಗಿ ಶಾಲಾ, ಕಾಲೇಜುಗಳಲ್ಲಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪರಿಚಯಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ತಿಳಿಸಿದರು.

ಹೋಬಳಿ ಕೇಂದ್ರದ ಗೊಮ್ಮಟೇಶ್ವರ ನಗರದಲ್ಲಿರುವ ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಅನ್ವೇಷಣೆ-19 ಸಾಂಸ್ಕೃತಿಕ ಕಾರ್ಯಕ್ರಮವನ್ನು ಕನ್ನಡದಲ್ಲಿ ಮಂತ್ರ ಹೇಳುವ ಮೂಲಕ ವಿನೂತನವಾಗಿ ಉದ್ಘಾಟಿಸಿ ಅವರು ಮಾತನಾಡಿದರು.

ಮಣ್ಣಿನ ಸಂಸ್ಕಾರ ಉಳಿಯಲಿ: ನಮ್ಮ ಈ ಮಣ್ಣಿನ ಸಂಸ್ಕಾರ ಉಳಿಯಬೇಕು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಬೇಕು ಎಂದರೆ ಯುವ ಸಮುದಾಯಕ್ಕೆ ನಮ್ಮ ಸಂಸ್ಕಾರ, ಸಂಸ್ಕೃತಿ ಪರಿಚಯವಾಗಬೇಕು ಇಲ್ಲದೆ ಹೋದರೆ ಕ್ರಮೇಣ ನಮ್ಮ ಸಂಸ್ಕೃತಿ ಕಣ್ಮರೆಯಾಗುತ್ತದೆ ಎಂದರು.

ವಿದ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣ ದೊರೆಯುತ್ತಿದೆ ಆದರೆ ದೇಶದ ಇತಿಹಾಸ, ಈ ಮಣ್ಣಿನ ಪರಂಪರೆಯ ಅರಿವು ಮೂಡಿಸುವ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಈ ಬಗ್ಗೆ ವಿಶ್ವ ವಿದ್ಯಾಲಯಗಳು ಹಾಗೂ ಸರ್ಕಾರ ಗಮನ ಹರಿಸಬೇಕು.

ಯುವ ಜನತೆ ಸರಿಯಾದ ಹಾದಿಯಲ್ಲಿ ನಡೆಯಬೇಕೆಂದರೆ ಸಂಸ್ಕಾರಯುತ ಶಿಕ್ಷಣ ನೀಡುವುದು ಅತ್ಯವಶ್ಯಕ ಹಾಗಾಗಿ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮಠಗಳಿಂದ ನಡೆಯುತ್ತಿರುವ ವಿದ್ಯಾಲಯ ಹಾಗೂ ಸರ್ಕಾರಿ ಶಿಕ್ಷಕರು ಇದನ್ನು ಮನಗಂಡು ಜ್ಞಾನಾರ್ಜನೆ ನೀಡಲು ಮುಂದಾಗಬೇಕು ಎಂದರು....

ಫೋಟೋ - http://v.duta.us/dXCcKAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/7cnm9QAA

📲 Get Hassan News on Whatsapp 💬