[haveri] - ಸ್ವಲ್ಪ ಓದು-ಸ್ವಲ್ಪ ಮೋಜು ಅರ್ಥಪೂರ್ಣ ಪರಿಕಲ್ಪನೆ

  |   Haverinews

ಹಾನಗಲ್ಲ: ಬೇಸಿಗೆ ಸಂಭ್ರಮದಿಂದ ಕಳೆಯಲು ಇಲಾಖೆ ‘ಸ್ವಲ್ಪ ಓದು-ಸ್ವಲ್ಪ ಮೋಜು’ ಎನ್ನುವ ವಿನೂತನ ಯೋಜನೆ ಜಾರಿಗೆ ತಂದಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ ಸಲಹೆ ನೀಡಿದರು.

ತಾಲೂಕಿನ ಹೇರೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವಶಿಕ್ಷಣ ಇಲಾಖೆ ಸಹಭಾಗಿತ್ವದಲ್ಲಿ ನಡೆಯುತ್ತಿರುವ 2019-20ನೇ ಸಾಲಿನ ರಜಾ ಅವಧಿಯ ಸ್ವಲ್ಪ ಓದು ಸ್ವಲ್ಪ ಮೋಜು ಪರಿಕಲ್ಪನೆಯ ಬೇಸಿಗೆ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಮನೆಗಿಂತ ಶಾಲೆಯ ಚಟುವಟಿಕೆಗಳು ಆಕರ್ಷಿಸುವಂತೆ ಪ್ರೇರೇಪಿಸಲು ಮತ್ತು ಮಕ್ಕಳು ರಜಾ ಅವಧಿಯಲ್ಲಿ ಕಲಿತದ್ದನ್ನು ಮರೆತು ಹೋಗುವುದನ್ನು ತಪ್ಪಿಸಲು ಈ ಯೋಜನೆ ಸಹಕಾರಿಯಾಗಿದೆ. ಹೀಗಾಗಿ ಆರು ಮತ್ತು ಏಳನೇ ತರಗತಿಯ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಮಕ್ಕಳು ಬೇಸಿಗೆಯನ್ನು ಸಂಭ್ರಮದಿಂದ ಕಳೆಯಲು ಪ್ರತಿ ವಾರವೂ ಕುಟುಂಬ, ನೀರು, ಆಹಾರ, ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಪರಿಸರ ಎನ್ನುವ ಒಂದೊಂದು ವಿಷಯದಂತೆ ಐದು ವಿಷಯಗಳನ್ನು ಮಕ್ಕಳು ಮೋಜಿನೊಂದಿಗೆ ಸ್ವಲ್ಪ ಅಭ್ಯಾಸವನ್ನು ಕಲಿಯುವಂತೆ ಮಾಡುವ ಮೂಲಕ ಶಿಕ್ಷಕರು ಮಕ್ಕಳ ಕಲಿಕೆಯನ್ನು ದೃಢೀಕರಿಸಬೇಕು ಎಂದರು....

ಫೋಟೋ - http://v.duta.us/8lIuDQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/68eVowAA

📲 Get Haveri News on Whatsapp 💬