[kalburagi] - ಕಾಲ ಕಟ್ಟಿ ಹಾಕೋ ಶಕ್ತಿ ಚಿತ್ರಕಲೆಗಿದೆ: ಡಾ| ಅಂದಾನಿ

  |   Kalburaginews

ಕಲಬುರಗಿ: ಇತಿಹಾಸ ವರ್ತಮಾನಕ್ಕೆ ತರುವ ಶಕ್ತಿ ಕಲೆಗಿದೆ. ಚಿತ್ರಕಲೆ, ಶಿಲ್ಪಕಲೆ, ವಾಸ್ತುಕಲೆ ಪ್ರಕಾರಗಳು ಇತಿಹಾಸದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದು, ಕಾಲ ಕಟ್ಟಿ ಹಾಕುವ ಶಕ್ತಿ ಹೊಂದಿರುವ ಚಿತ್ರಕಲೆಗಿದೆ ಎಂದು ಹಿರಿಯ ಕಲಾವಿದ ಡಾ| ವಿ.ಜಿ.ಅಂದಾನಿ ಹೇಳಿದರು.

ನಗರದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ರವಿವಾರ ಹಮ್ಮಿಕೊಂಡಿದ್ದ ಶರಣಬಸವ ವಿಶ್ವವಿದ್ಯಾಲಯ ಲಲಿತಕಲಾ ವಿಭಾಗದ ಮುಖ್ಯಸ್ಥ, ಹಿರಿಯ ಕಲಾವಿದ ಡಾ| ಸುಬ್ಬಯ್ಯ ಎಂ.ನೀಲಾ ಅವರ ಕುರಿತ ‘ನೀಲಾಮೃತ’ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 64 ವಿಧದ ಕಲೆಗಳಲ್ಲಿ ಕುಲಕಸಬುಗಳಾದ ಕಮ್ಮಾರಿಕೆ, ಬಡಿಗೆತನ, ಕುಂಬಾರಿಕೆ ಕೂಡ ಕಲೆಗಾರಿಕೆ ಭಾಗವಾಗಿವೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಶರಣಬಸವ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಡಾ| ವಿ.ಡಿ. ಮೈತ್ರಿ, ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಲಲಿತ ಕಲೆಗಳು ವ್ಯಾಪಕವಾಗಿ ಬೆಳೆಯಬೇಕೆಂಬ ಆಶಯ ವ್ಯಕ್ತಪಡಿಸಿದರು.

‘ನೀಲಾಮೃತ’ ಗ್ರಂಥ ಪರಿಚಯಿಸಿದ ಹಿರಿಯ ಸಾಹಿತಿ ಡಾ| ಸ್ವಾಮಿರಾವ ಕುಲಕರ್ಣಿ ಮಾತನಾಡಿ, ಚಿತ್ರಕಲೆಯು ಮೌನದ ಭಾಷೆ. ಇದನ್ನು ಸಶಕ್ತವಾಗಿ ಬಳಸಲು ಕಲಿತರೆ ಮಾತ್ರ ಉತ್ತಮ ಕಲಾವಿದರಾಗಲು ಸಾಧ್ಯ. ಇದನ್ನು ಡಾ| ಎಸ್‌.ಎಂ.ನೀಲಾ ಸಾಧಿಸಿದ್ದಾರೆ. ಕಷ್ಟ ಪಟ್ಟು ಬೆಳೆದ ನೀಲಾ ತಮ್ಮ ಅನುಭವವನ್ನೇ ಕಲೆಯನ್ನಾಗಿಸಿಕೊಂಡಿದ್ದಾರೆ ಎಂದರು....

ಫೋಟೋ - http://v.duta.us/S_3_7QAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/d2O-sQAA

📲 Get Kalburagi News on Whatsapp 💬