[kalburagi] - ಮೊಸಳೆ ದಾಳಿಗೆ ಕುರಿಗಾಹಿ ಬಲಿ

  |   Kalburaginews

ಸೈದಾಪುರ: ಎರಡು ಮೊಸಳೆ ದಾಳಿಗೆ ಕುರಿಗಾಹಿಯೊಬ್ಬ ಮೃತಪಟ್ಟ ಘಟನೆ ಸಮೀಪದ ಗುಡೂರು ಭೀಮಾ ನದಿ ದಡದಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

ಗುಡೂರಿನ ಬಸವಲಿಂಗಪ್ಪ (55) ಎಂಬಾತ ಮೃತಪಟ್ಟ ವ್ಯಕ್ತಿ. ಬಸವಲಿಂಗಪ್ಪ ದಿನನಿತ್ಯದಂತೆ ತನ್ನ 50 ಕುರಿಗಳನ್ನು ಮೇಯಿಸಲು ನದಿ ತೀರದ ಪ್ರದೇಶಕ್ಕೆ ಹೋಗಿದ್ದ. ರವಿವಾರ ಮಧ್ಯಾಹ್ನದ ವೇಳೆಗೆ ಕುರಿಗಳಿಗೆ ನೀರು ಕುಡಿಸಲು ಹೋದಾಗ ಈ ಘಟನೆ ಸಂಭವಿಸಿದೆ.

ಕುರಿಗಳಿಗೆ ನೀರುಣಿಸಿ ನಂತರ ಆತ ತನ್ನ ಜತೆಗಾರನೊಂದಿಗೆ ನದಿ ದಂಡೆಯಲ್ಲಿ ಕುಳಿತು ಊಟ ಮಾಡಿದ. ನಂತರ ನೀರು ಕುಡಿಯಲು ನದಿಗೆ ಇಳಿದ ವೇಳೆ ಎರಡು ಮೊಸಳೆಗಳು ಏಕಾಏಕಿ ದಾಳಿ ಮಾಡಿ ಆತನನ್ನು ಎಳೆದೋಯ್ದವು. ನಂತರ ಆತ ಮೊಸಳೆ ಜತೆ ಸತತ 10-15 ನಿಮಿಷ ಕಾದಾಡಿ ಪ್ರಾಣ ಉಳಿಸಿಕೊಳ್ಳಲು ಯತ್ನಿಸಿದ. ಇದನ್ನು ನೋಡಿದ ಆತನ ಇನ್ನೊಬ್ಬ ಸಹಚರ ವೃದ್ಧನಾದ ಪರಿಣಾಮ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಆತನ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮತ್ತು ಸ್ಥಳೀಯ ಮೀನುಗಾರರು ಮೊಸಳೆಗಳಿಂದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿಯೇ ಆತನ ಎಡಗೈ ಮತ್ತು ಬಲಗಾಲನ್ನು ಮೊಸಳೆಗಳು ತಿಂದಿದ್ದವು. ಪರಿಣಾಮ ಮೀನುಗಾರರು ಮಾಡಿದ ಪ್ರಯತ್ನ ಪ್ರಯೋಜವಾಗದೇ ಆತ ಮೃತಪಟ್ಟ ಎನ್ನಲಾಗಿದೆ....

ಫೋಟೋ - http://v.duta.us/sOgeLwAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/dJtMUwAA

📲 Get Kalburagi News on Whatsapp 💬