[karnataka] - ಬಿಸಿಲು ನಾಡಾದ ಮಲೆನಾಡು

  |   Karnatakanews

ಶಿವಮೊಗ್ಗ: ಇಲ್ಲಿಯ ಬಿಸಿಲು ಬಯಲು ಸೀಮೆ ಬಳ್ಳಾರಿ ಬಿಸಿಲನ್ನೂ ಮೀರಿಸುವಂತಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಆರಂಭವಾಗುವ ಬಿಸಿಲ ಝಳ ಸಂಜೆ 5 ಗಂಟೆಯಾದರೂ ಕಡಿಮೆಯಾಗುತ್ತಿಲ್ಲ. ರಾತ್ರಿ ಕೂಡ ಬಿಸಿ ಗಾಳಿಗೆ ಜನ ಹೈರಾಣಾಗಿದ್ದಾರೆ. ಜಿಲ್ಲೆಯ ಸರಾಸರಿ ಉಷ್ಣಾಂಶ 38.7 ಡಿ.ಸೆ.ಗೆ ತಲುಪಿದರೆ, ಶಿವಮೊಗ್ಗ ನಗರದಲ್ಲಿ ಶನಿವಾರ ಈ ವರ್ಷದ ಗರಿಷ್ಠ ತಾಪಮಾನ 39.5 ಡಿಗ್ರಿ ದಾಖಲಾಗಿದೆ.

ಏ.23ರಿಂದ ಜಿಲ್ಲೆಯ ಸರಾಸರಿ ಉಷ್ಣಾಂಶ ನಿರಂತರವಾಗಿ 38.5 ಡಿ.ಸೆ.ದಾಖಲಾಗುತ್ತಿದೆ. ಒಂದು ಕಾಲದಲ್ಲಿ ಮಲೆನಾಡು ಸದಾ ತಂಪಾಗಿರುತ್ತಿತ್ತು. ವರ್ಷದಲ್ಲಿ ಸತತ ಏಳು ತಿಂಗಳ ಮಳೆ, ಸಮೃದ್ಧ ಹಸಿರು ಹೊದ್ದು ಮಲಗಿರುತ್ತಿದ್ದ ದಟ್ಟ ಅರಣ್ಯದಿಂದ ಎಂತಹ ಬೇಸಿಗೆಯಾದರೂ ವಾತಾವರಣ ತಂಪು ತಂಪಾಗಿರುತ್ತಿತ್ತು. ಈಗ ಪರಿಸ್ಥಿತಿ ತಿರುವು ಮುರುವಾಗಿದೆ. ಮಲೆನಾಡು ಬಿಸಿಲ ನಾಡಾಗಿದೆ.

ವಾಯುಭಾರ ಕುಸಿತದಿಂದ ದಕ್ಷಿಣ ರಾಜ್ಯಗಳಲ್ಲಿ ಬಿಸಿಗಾಳಿ: ವಾಯುಭಾರ ಕುಸಿತವು ವಾತಾವರಣದಲ್ಲಿನ ತೇವಾಂಶ ಸೆಳೆದುಕೊಂಡಿರುವುದರಿಂದ ದಕ್ಷಿಣದ ರಾಜ್ಯಗಳಲ್ಲಿ ಬಿಸಿ ಗಾಳಿ ಬೀಸುತ್ತಿದೆ. ಹೀಗಾಗಿ, ಮೂರ್‍ನಾಲ್ಕು ದಿನಗಳಿಂದ ಉಷ್ಣಾಂಶ 2ರಿಂದ 4 ಡಿಗ್ರಿಯಷ್ಟು ಏರಿಕೆ ಕಂಡು ಗರಿಷ್ಠ ಮಟ್ಟ ದಾಖಲಿಸಿದೆ. ಆದರೆ, ಚಂಡಮಾರುತದ ಪರಿಣಾಮ ಮಲೆನಾಡು ಪ್ರದೇಶದಲ್ಲಿ ಮೇ 1 ಮತ್ತು 2ರಂದು ಮಳೆಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿ ಕಾರಿಗಳು.

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/kGkkowAA

📲 Get Karnatakanews on Whatsapp 💬