[kolar-karnataka] - ನರಸಾಪುರ ಕೆರೆ ಕೋಡಿ:ಡೀಸಿ ಪರಿಶೀಲನೆ

  |   Kolar-Karnatakanews

ಕೋಲಾರ: ಸುಪ್ರೀಂ ಕೋರ್ಟ್‌ ತಡೆ ಯಾಜ್ಞೆ ತೆರವಾದ ನಂತರ ಕೆ.ಸಿ.ವ್ಯಾಲಿ ನೀರು ಲಕ್ಷ್ಮೀಸಾಗರ ಕೆರೆಯಿಂದ ನರಸಾಪುರ ಕೆರೆ ಸೇರಿ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆರೆಗಳು ಭರ್ತಿಯಾದರೆ ಈ ಭಾಗದ ಅಂತರ್ಜಲ ವೃದ್ಧಿಗೆ ಸಹಕಾರಿ. ರೈತರು ಈ ನೀರನ್ನು ನೇರವಾಗಿ ಕೃಷಿಗೆ ಬಳಸ ಬಾರದು ಎಂದು ತಿಳಿಸಿದರು.

ಅಂತರ್ಜಲ ಹೆಚ್ಚಳ: ರೈತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಪ್ರಸ್ತು ತ 250 ಎಂಎಲ್ಡಿ ನೀರು ಹರಿ ಯುತ್ತಿ ದೆ. ಮುಂದಿನ ದಿನಗಳಲ್ಲಿ ಹೆಚ್ಚು ವರಿ ನೀರು ಹರಿಯುವುದರಿಂದ ಅಂತ ರ್ಜ ಲ ಮಟ್ಟ ಹೆಚ್ಚಳವಾಗಲಿದೆ ಎಂದರು.

ಮುನ್ನೆಚ್ಚರಿಕೆ ವಹಿಸಿ: ರೈತರು ಯಾವುದೇ ಕಾರಣಕ್ಕೂ ಕೆರೆ ನೀರನ್ನು ಭತ್ತ ಬೆಳೆಯಲು ಉಪಯೋಗಿಸ ಬಾರದು, ಅಕ್ರಮವಾಗಿ ತೂಬು ತೆರೆದು ಹೊಲಗದ್ದೆಗಳಿಗೆ ನೀರನ್ನು ಬಳಸಿಕೊಳ್ಳ ಬಾರದು, ಕೆ.ಸಿ. ವ್ಯಾಲಿ ನೀರಿನ ಜತೆಗೆ ಮಳೆ ಬರುವ ಮುನ್ಸೂಚನೆ ಇರುವುದ ರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.

ಇಳುವರಿ ಪಡೆಯಿರಿ: ಕೆ.ಸಿ. ವ್ಯಾಲಿ ಮೂಲಕ ಮತ್ತೆ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿರುವುದು ಸಂತಸದ ಸಂಗತಿ. ಎಲ್ಲಾ ಕೆರೆಗಳು ಭರ್ತಿಯಾದರೆ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯು ತ್ತದೆ. ಮುಂದಿನ ದಿನಗಳಲ್ಲಿ ರೈತರು ಅಂತರ್ಜಲ ಬಳಸಿ ಉತ್ತಮ ಇಳುವರಿ ಪಡೆಯಬಹುದೆಂದರು. ಕೆರೆ ನೀರು ಸಂರಕ್ಷಣೆಗಾಗಿ ಲಕ್ಷ್ಮೀ ಸಾಗರ ಇನ್ನಿತರ ಹಳ್ಳಿಗಳ ಜನರು ಕೆರೆಗಳ ಸುತ್ತಮುತ್ತಲಿನ ನೀಲಗಿರಿ ಮರಗಳನ್ನು ತೆರವುಗೊಳಿ ಸುವ ಮೂಲಕ ಪ್ರಜ್ಞಾ ವಂತಿಕೆ ಪ್ರದರ್ಶಿಸಿದ್ದಾರೆಂದು ಶ್ಲಾಘಿಸಿ ದರು....

ಫೋಟೋ - http://v.duta.us/uLiFZQAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/msirqAAA

📲 Get Kolar Karnataka News on Whatsapp 💬