[kolar-karnataka] - ಮುಳಬಾಗಿಲಲ್ಲಿ ಕೆರೆ ಒತ್ತುವರಿ ತೆರವಿಗೆ ಗ್ರಹಣ

  |   Kolar-Karnatakanews

ಮುಳಬಾಗಿಲು: ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ವರದಿಗಳ ಅನ್ವಯ ರಾಜ್ಯ ಉಚ್ಚನ್ಯಾಯಾಲಯ ಆದೇಶದಂತೆ ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ಮತ್ತು ತೆರವುಗೊಳಿಸಲು ರಚಿಸಲಾಗಿದ್ದ ಯೋಜನೆ ತಾಲೂಕಿ ನಲ್ಲಿ ಕಳೆದ 4-5 ವರ್ಷಗಳಿಂದ ಗ್ರಹಣ ಹಿಡಿದಿದೆ.

ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ರಾಜ್ಯ ಸರ್ಕಾರ ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತಂದು 192ಎ ಅನ್ವಯ ಒತ್ತುವರಿದಾರರನ್ನು ಶಿಕ್ಷೆಗೆ ಗುರಿಪಡಿಸಲು ಕಾಯ್ದೆಯಲ್ಲಿ ಈಗಾಗಲೇ ಅವಕಾಶ ಕಲ್ಪಿಸಲಾಗಿತ್ತು. ಸರ್ಕಾರಿ ಭೂಮಿಗಳ ಒತ್ತುವರಿ ತಡೆಗಟ್ಟಲು ಎ.ಟಿ.ರಾಮಸ್ವಾಮಿ ಮತ್ತು ಬಾಲಸುಬ್ರಮಣ್ಯಂ ವರದಿಗಳ ಅನ್ವಯ ನ್ಯಾಯಾಲಯದ ಆದೇಶದಂತೆ ಸರ್ಕಾರಿ ಭೂಮಿಗಳ ಸಂರಕ್ಷಣೆ ಮತ್ತು ಒತ್ತುವರಿ ಜಮೀನು ತೆರವುಗೊಳಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಿ.ಲತಾ ಕೃಷ್ಣರಾವ್‌ 2013ರ ಮೇ 27 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಿದ್ದರು.

ಅದರಂತೆ ಮೂಲಭೂತವಾಗಿ ಕಂದಾಯ ಇಲಾಖೆ ಸರ್ಕಾರದ ಭೂಮಿ ಗುರ್ತಿಸಿ ಅದರ ವಿಸ್ತೀರ್ಣ ಅಳತೆ ಮಾಡಿ ಒತ್ತುವರಿ ತೆರವುಗೊಳಿಸಲು ಸರ್ಕಾರ ಕಳೆದ ವರ್ಷ ಸುತ್ತೋಲೆ ಹೊರಡಿಸಿತ್ತು. ಅದರಂತೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಂದಿನ ಮುಳಬಾಗಿಲು ತಹಶೀಲ್ದಾರ್‌ ಎಂ.ಗಂಗಪ್ಪ, ತಾಲೂಕಿನ ಆವಣಿ, ಕಸಬಾ, ತಾಯಲೂರು, ಬೈರಕೂರು, ದುಗ್ಗಸಂದ್ರ ಸೇರಿ 5 ಹೋಬಳಿಯಲ್ಲಿನ 433 ಕೆರೆ, ಸ್ಮಶಾನ, ಗುಂಡು ತೋಪು ಒತ್ತುವರಿ ತೆರವುಗೊಳಿಸಲು ಅಧೀನ ಅಧಿಕಾರಿಗಳಿಗೆ ಸೂಚಿಸಿ ತಾವೂ ಕಾರ್ಯಪ್ರವೃತ್ತರಾಗಿದ್ದರು. ಅಲ್ಲದೇ, ತೆರವು ಕಾರ್ಯಾಚರಣೆ ಚುರುಕುಗೊಳಿಸಿದ್ದರು....

ಫೋಟೋ - http://v.duta.us/oA2qEAAA

ಹೆಚ್ಚು ಓದಲು ಇಲ್ಲಿ ಕ್ಲಿಕ್ ಮಾಡಿ - http://v.duta.us/mSFvBQAA

📲 Get Kolar Karnataka News on Whatsapp 💬